ತುಂಡುಡುಗೆ ತೊಟ್ಟು ದುರ್ಗಾ ಪೂಜೆಗೆ ಬಂದ ಯುವತಿಯರು..!! ಇದೇನಾ ಸಂಸ್ಕೃತಿ..ಇದೇನಾ ಸಭ್ಯತೆ!! ಎಂದು ಆಕ್ರೋಶ ಹೊರಹಾಕಿದ ನೆಟ್ಟಿಗರು

Share with

ಧಾರ್ಮಿಕ ಕ್ಷೇತ್ರಗಳಿಗೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಹೊರಡುವಾಗ ಸಾಂಪ್ರದಾಯಿಕ ಉಡುಗೆಗಳನ್ನು ತೊಡುವುದು ನಮ್ಮ ಭಾರತೀಯ ಸಂಪ್ರದಾಯ ಎಂದೇ ಹೇಳಬಹುದು. ಬಹುತೇಕರು ಈ ಸಂಪ್ರದಾಯವನ್ನು ಪಾಲಿಸುತ್ತುದ್ದಾರೆ ಕೂಡಾ. ಆದ್ರೆ ನವರಾತ್ರಿ ಹಬ್ಬದಲ್ಲಿ ಕೊಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಮೂವರು ಮಾಡೆಲ್ ಗಳು ತುಂಡುಡುಗೆ ತೊಟ್ಟು ಭಾಗವಹಿಸಿದ್ದಾರೆ. ಇವರುಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೆಂಥಾ ಸಂಸ್ಕೃತಿ ಎಂದು ಇವರ ಅವತಾರಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋಲ್ಕತ್ತಾದ ಮೂವರು ಮಾಡೆಲ್‌ಗಳು ದುರ್ಗಾ ಪೂಜೆಯಲ್ಲಿ ತುಂಡುಡುಗೆ ತೊಟ್ಟು ಭಾಗವಹಿಸಿದ್ದಾರೆ. ಸ್ವತಃ ಈ ಫೋಟೋವನ್ನು ಮಾಡೆಲ್ ಸನ್ನತಿ (sannati__ ) ಮತ್ತು (selena.bb22) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೂವರು ಯುವತಿಯರು ಅರೆಬರೆ ಬಟ್ಟೆ ತೊಟ್ಟು, ಚಪ್ಪಲಿ ಧರಿಸಿ ದೇವಿಯ ವಿಗ್ರಹದ ಮುಂದೆ ನಿಂತಿರುವ ದೃಶ್ಯವನ್ನು ಕಾಣಬಹುದು.

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನಾನು ಒಬ್ಬ ಮುಸ್ಲಿಮನಾಗಿ ಹೇಳುತ್ತಿದ್ದೇನೆ ಪವಿತ್ರ ಸ್ಥಳದಲ್ಲಿ ಇಂತಹ ಡ್ರೆಸ್ಸಿಂಗ್‌ ತುಂಬಾನೇ ಅಸಹ್ಯಕರವಾಗಿದೆ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ದಯವಿಟ್ಟು ದುರ್ಗಾ ಪೂಜೆಯನ್ನು ಹಾಳು ಮಾಡಬೇಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಪವಿತ್ರ ಸ್ಥಳದಲ್ಲಿ ಇದೆಂತಾ ಅಸಹ್ಯ ಅಂತ ಹೇಳಿದ್ದಾರೆ.

ಅಷ್ಟಕ್ಕೂ ಈ ಫೋಟೋ ನಕಲಿಯೋ .. ಅಸಲಿಯೋ ಅನ್ನುವುದರ ಬಗ್ಗೆ ಸಂಶಯವಿದ್ದು ಇದು ಎಡಿಟೆಡ್‌ ಫೋಟೋವೆಂದು ಹೇಳಲಾಗುತ್ತಿದೆ.


Share with

Leave a Reply

Your email address will not be published. Required fields are marked *