ಕಣ್ಣೂರಿನಲ್ಲಿ ಯುವಕನ ಮೇಲೆ ಚಾಕು ಇರಿತ

Share with

ಮಂಗಳೂರು: ಇಲ್ಲಿನ ಬಜ್ಪೆಯಲ್ಲಿ ಹಿಂದುತ್ವ ಕಾರ್ಯಕರ್ತನರೊಬ್ಬರ ಕೊಲೆ ನಡೆದಿರುವ ಬೆನ್ನಿಗೇ ಅಡ್ಯಾರ್ ಕಣ್ಣೂರಿನಲ್ಲಿ ಮುಂಜಾನೆ ಯುವಕನೋರ್ವನ ಮೇಲೆ‌ ದುಷ್ಕರ್ಮಿಗಳು ಚೂರಿ ಇರಿತ ನಡೆಸಿದ್ದಾರೆ.

ಚೂರಿಇರಿತಕ್ಕೊಳಗಾದವರನ್ನು ನೌಷಾದ್ ಎಂದು ಗುರುತಿಸಲಾಗಿದ್ದು, ನಗರ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಈ ಘಟನೆ‌ ನಡೆದಿದೆ.

ನೌಶಾದ್ ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪಿನ ಮಾರ್ಕೆಟ್‌ಗೆ ಹೋಗಲು ಮುಂಜಾನೆ 3 ಗಂಟೆಗೆ ಅಡ್ಯಾರ್ ಕಣ್ಣೂರು ಹೆದ್ದಾರಿಯಲ್ಲಿ ನಿಂತಿದ್ದ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ನೌಷಾದ್‌ರ ಬೆನ್ನಿಗೆ ಚೂರಿಯಿಂದ ಇರಿದರು ಎನ್ನಲಾಗಿದೆ.

ಚೂರಿ ಇರಿತವಾದ ತಕ್ಷಣ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ನೌಷಾದ್ ಓಡಿ ಪರಾರಿಯಾಗಿದ್ದು, ಬಳಿಕ‌ ಸ್ಥಳೀಯರು ಆತನನ್ನು ನಗರದ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *