ಯುವವಾಹಿನಿ(ರಿ.) ಮಾಣಿ ಘಟಕದಿಂದ ಧ್ವಜ ಸ್ತಂಭ ಕೊಡುಗೆ ಹಾಗೂ ಸ್ವಾತಂತ್ರ್ಯ ದಿನಾಚರಣೆ

Share with

ಕಲ್ಲಡ್ಕ :  ಯುವವಾಹಿನಿ(ರಿ.) ಮಾಣಿ ಘಟಕದ ವತಿಯಿಂದ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಕೊಂಕಣಪದವು ಅಂಗನವಾಡಿ ಕೇಂದ್ರಕ್ಕೆ ನೂತನ ಧ್ವಜ ಸ್ತಂಭ ವನ್ನು ನಿರ್ಮಿಸಿ ಕೊಡುವುದರ  ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಂಗನವಾಡಿ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಧ್ವಜಾರೋಹನಗೊಳಿಸಿ ಮಾತನಾಡಿದ ಘಟಕದ ಅಧ್ಯಕ್ಷರಾದ ನಾಗೇಶ್ ಕೊಂಕಣಪದವು ರವರು ಅಂಗನವಾಡಿ ಕೇಂದ್ರಕ್ಕೆ ಧ್ವಜ ಸ್ತಂಭವನ್ನು ನಿರ್ಮಿಸಿ ಕೊಡುವಂತ ಭಾಗ್ಯ ನಮ್ಮದಾಯಿತು, ಇಂತಹ ಸಮಾಜಮುಖಿ ಕಾರ್ಯವನ್ನು ಘಟಕದ ವತಿಯಿಂದ ಮಾಡಿರುವುದು ಸಂತೋಷದ ವಿಷಯ ಎಂದರು ಮತ್ತು ಧ್ವಜ ಸ್ತಂಭ ನಿರ್ಮಾಣಕ್ಕೆ ಧನಸಹಾಯ ನಿಡಿದ ಸದಸ್ಯರಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಘಟಕದ ವತಿಯಿಂದ ಕೃತಜ್ಞತೆ ಸಲ್ಲಿಸಿದರು.
ತದನಂತರ ಧ್ವಜಸ್ತಂಭಕ್ಕೆ ಸೇರಿದ ಎಲ್ಲರು ನಮಿಸಿ ರಾಷ್ಟ್ರ ಗೀತೆಯನ್ನು ಹಾಡಿದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಸೇರಿದ ಎಲ್ಲ ಸದಸ್ಯರಿಗೆ ಸಿಹಿ ತಿಂಡಿ ಹಂಚಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಬ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ ಘಟಕದ ಕಾರ್ಯದರ್ಶಿಯಾದ ಶಾಲಿನಿ ಜಗದೀಶ್,ಪೆರಾಜೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ  ಶಶಿ ಕುಮಾರಿ,ಸದಸ್ಯರಾದ  ರಾಜರಾಮ್ ಭಟ್ ಕಡೂರು,ಮಾಜಿ ಪಂಚಯಾತಿ ಸದಸ್ಯರು ಉಮೇಶ್ ಎಸ್ ಪಿ ಪೆರಾಜೆ, ಮಾಣಿ ಸರ್ಕಾರಿ ಶಾಲೆಯ ಶಾಲಾಭಿವೃದ್ದಿಯ ಸಮಿತಿಯ ಅಧ್ಯಕ್ಷರು  ಕುಶಾಲಪ್ಪ ಗೌಡ,ಅಂಗನವಾಡಿ ಕೇಂದ್ರದ ಸಮಿತಿಯ ಅಧ್ಯಕ್ಷೆ  ಯಶೋಧ,ಘಟಕದ ನಿರ್ದೇಶಕರಾದ ಸತೀಶ್ ಮುರುವ,ಸದಸ್ಯರಾದ ಬಾಲಕೃಷ್ಣ ಶೇರಾ,ರಾಜೇಶ್ ಬಲ್ಯ, ಅಂಗನವಾಡಿಯ ಶಿಕ್ಷಕಿಯಾದ ಕು. ರಕ್ಷಿತಾ ಸಹಯಾಕಿಯಾದ  ಹೇಮಾವತಿ,ಮಕ್ಕಳು,ಪೊಷಕರು ಹಾಗೂ ಗ್ರಾಮದ ವಿವಿಧ ಗಣ್ಯರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *