ಪುತ್ತೂರು: ಇಲ್ಲಿನ ಕಲ್ಲರ್ಪೆಯಲ್ಲಿ ಪಿಕಪ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜೂ.28 ರಂದು ಮಧ್ಯಾಹ್ನ ನಡೆದಿದೆ. ಭೀಕರ ಅಪಘಾತದಿಂದ ಬೈಕ್ ಸವಾರ ನಾಗರಾಜ(53 ವ)ರವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ಸುಳ್ಯದ ಜಟ್ಟಿಪಳ್ಳ ನಿವಾಸಿ ನಾಗರಾಜ(53) ಎಂದು ತಿಳಿದು ಬಂದಿದೆ. ಮೃತದೇಹ ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.