ಮಂಜೇಶ್ವರ: ವರ್ಕಾಡಿ ಕಾವೀ ಸುಬ್ರಹ್ಮ‍್ಯಣ್ಯ ದೇವಸ್ಥಾನದ ಸದಸ್ಯರು ಹಾಗೂ ಊರಿನವರು ಜೊತೆಗೂಡಿ ವರ್ಕಾಡಿ ಬೇಕರಿಯಿಂದ ತೌಡುಗೋಳಿ ತನಕ ರಸ್ತೆ ಬದಿಯ ಕಸ ಕಡ್ಡಿಗಳನ್ನು ಹೆಕ್ಕಿ ಶುಚಿತ್ವಗೊಳಿಸಿದ್ದಾರೆ.

ಜೊತೆಗೆ ಪರಿಸರ ದಿನದ ಅಂಗವಾಗಿ ವರ್ಷಂಪ್ರತಿಯಂತೆ ಈ ಬಾರಿಯೂ ಮಾರ್ಗದುದ್ದಕ್ಕೂ ಗಿಡಗಳನ್ನು ನೆಟ್ಟಿದ್ದಾರೆ. ಹಲಸಿನ ಹಣ್ಣಿನ ಗಿಡ, ಮಾವಿನ ಹಣ್ಣಿನ ಗಿಡ, ಸೀತಫಲ, ಹೆಬ್ಬಲಸು, ನೇರಳೆ, ಸಾಗುವನಿ, ನೆಲ್ಲಿಕಾಯಿ ಗಿಡಗಳು ಸೇರಿದಂತೆ ಒಟ್ಟು ನೂರು ಗಿಡಗಳನ್ನು ನೆಟ್ಟಿದ್ದಾರೆ.
