ಬಂಟ್ವಾಳ: ವೀರಕಂಬ ಗ್ರಾಮದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಶ್ರೀ ಶಾರದಾ ಸೇವಾ ಟ್ರಸ್ಟ್(ರಿ) ಹಾಗೂ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿ ವತಿಯಿಂದ 39ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ಅಕ್ಟೋಬರ್ 15 ರಿಂದ ಆರಂಭಗೊಂಡು ಅಕ್ಟೋಬರ್ 23 ತನಕ ನಡೆಯಲಿರುವುದು.
ದಿನಾಂಕ 15-10-2023 ರಂದು ಧ್ವಜಾರೋಹಣ ಬಳಿಕ ದಿನನಿತ್ಯ ಸಂಜೆ 7 ಗಂಟೆಯಿಂದ 9 ಗಂಟೆ ತನಕ ಭಜನಾ ಕಾರ್ಯಕ್ರಮ ನೆರವೇರಲಿರುವುದು. ದಿನಾಂಕ 21-10-2023 ಶನಿವಾರ ಬೆಳಿಗ್ಗೆ ಗಣ ಹೋಮ ನಂತರ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಹಾಗೂ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6:00 ತನಕ ಅರ್ಧ ಏಕಹ ಭಜನಾ ಕಾರ್ಯಕ್ರಮ, ದಿನಾಂಕ 22-10-2023ನೇ ಆದಿತ್ಯವಾರ ಸಂಜೆ ಗಂಟೆ 4:30ರಿಂದ ದುರ್ಗಾ ನಮಸ್ಕಾರ ಪೂಜೆ, ಸಂಜೆ 7 ಗಂಟೆ ಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿರುವುದು.
ದಿನಾಂಕ 23-10-2023 ನೇ ಸೋಮವಾರ ಬೆಳಿಗ್ಗೆ ಗಂಟೆ 10:30ಕ್ಕೆ ರಂಗಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ನಂತರ ವಿಸರ್ಜನ ಪೂಜೆ ನಡೆದು ಶ್ರೀ ಶಾರದಾ ಮಾತೆಯ ಭವ್ಯ ಶೋಭಯಾತ್ರೆ ಎರ್ಮೆ ಮಜಲು ಗಣೇಶ್ ಕೊಡಿ ತನಕ ನಡೆದು ವಿರಕಂಬ ಮಜಿ ಶಾಲಾ ಪಕ್ಕ ಇರುವ ಮಲ್ಲಿಗೆ ಕೆರೆಯಲ್ಲಿ ಜಲಸ್ಥಂಭಣ ಮಾಡಲಾಗುವುದು. ಎಂದು ಸಂಘಟಕರು ತಿಳಿಸಿರುತ್ತಾರೆ.