ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ 8 ವರ್ಷದ ಬಾಲಕನೊಬ್ಬನ ಇನ್ಸ್ಪೆಕ್ಟರ್ ಆಗುವ ಆಸೆಯನ್ನು ಶಿವಮೊಗ್ಗ ಪೊಲೀಸರು ಈಡೇರಿಸಿದ್ದಾರೆ. ಬಾಳೇಹೊನ್ನೂರಿನ ಆಜಾನ್ ಖಾನ್, ಹುಟ್ಟುವಾಗಲೇ ಹಾಫ್ ಹಾರ್ಟೆಡ್ ಮಗುವಾಗಿ ಹುಟ್ಟಿದ್ದ.
ಹುಟ್ಟಿದಾಗಲೇ ಒಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕ, ಈಗ ಮತ್ತೊಂದು ಶಸ್ತ್ರಚಿಕಿತ್ಸೆ ಆಗಬೇಕಿದೆ. ನಟ ಸುದೀಪ್ ಅವರನ್ನು ನೋಡಬೇಕು, ಇನ್ಸ್ಪೆಕ್ಟರ್ ಆಗಬೇಕೆಂಬುದು ಆಜಾನ್ ಆಸೆಯಾಗಿತ್ತು. ಹೀಗಾಗಿ, ಶಿವಮೊಗ್ಗ ಪೊಲೀಸರು ಮಗುವಿನ ಆಸೆ ಈಡೇರಿಸಿದ್ದಾರೆ