ಉಪ್ಪಳ: ಪ್ರೆಂಡ್ಸ್ ಕ್ಲಬ್ ಜೋಡುಕಲ್ಲು ಇದರ 34ನೇ ವಾರ್ಷಿಕೋತ್ಸವ ಫೆ.3ರಂದು ರಾತ್ರಿ ಜೋಡುಕಲ್ಲು ಜಂಕ್ಷನ್ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ರಾತ್ರಿ 7ರಿಂದ ನೃತ್ಯ ವೈಭವ, 8ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ದಯಾನಂದ ಮಾಡ ಅಧ್ಯಕ್ಷತೆ ವಹಿಸುವರು. ಸಂತೋಷ್ ಕುಮಾರ್ ರೈ ಬೋಳಿಯಾರ್, ವಿಜಯ ಪಂಡಿತ್, ರಮೇಶ್ ಆಳ್ವ ಪಿಲಿಯಂದೂರು ಮೊದಲಾದ ಗಣ್ಯರು ಭಾಗವಹಿಸುವರು.
ಈ ಸಂದರ್ಭದಲ್ಲಿ ಮುಖ್ಯೋಪಧ್ಯಾಯರು ಹಾಗೂ ಸಾಮಾಜಿಕ ಕಾರ್ಯಕರ್ತ ವೆಂಕಪ್ಪ ಶೆಟ್ಟಿ ಕಯ್ಯಾರು ಇವರನ್ನು ಸನ್ಮಾನಿಸಲಾಗುವುದು. ರಾತ್ರಿ 10ರಿಂದ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ತನಿಯಜ್ಜೆ ತುಳು ವಿನೂತನ ಶೈಲಿಯ ನಾಟಕ ಪ್ರದರ್ಶನಗೊಳ್ಳಲಿದೆ.