ಸುಳ್ಯ: ಇಲ್ಲಿನ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜು. 15ರಂದು ‘ಅಬಾಕಸ್ ‘ ಗಣಿತ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಶಾಲಾ ಆಡಿಟೋರಿಯಮ್ ನಲ್ಲಿ ನಡೆಯಿತು. ದೀಪವನ್ನು ಬೆಳಗಿಸುವುದರ ಮೂಲಕ ‘ಅಬಾಕಸ್ ‘ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿ ‘ಅಬಾಕಸ್ ‘ ತರಗತಿಯನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ವಿದ್ಯಾರ್ಥಿಗಳು ಗಣಿತದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ ಜೊತೆಗೆ ಅವರ ಬೌದ್ಧಿಕ ಸಾಮರ್ಥ್ಯ ವೃದ್ಧಿಗೊಳ್ಳುತ್ತದೆ ಎಂದು ತಿಳಿಸಿದರು.
ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಪುತ್ತೂರು ಮತ್ತು ಸುಳ್ಯ ಇದರ CEO ಪ್ರಫುಲ್ಲ ಗಣೇಶ್ ರವರು ‘ಅಬಾಕಸ್ ‘ ಅಬಾಕಸ್ ತರಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು ಜೆ ಶುಭಹಾರೈಸಿದರು. ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಗಣೇಶ್ ಕೈಂದಾಡಿ, ತರಬೇತುದಾರರಾದ ನಿಕ್ಷಿತಾ ಮತ್ತು ಹರ್ಷಿತಾ ಉಪಸ್ಥಿತರಿದ್ದರು