ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ 81ನೇ ಯೋಜನೆಯ ಸಹಾಯಹಸ್ತವನ್ನು ವಿತರಿಸಲಾಯಿತು.
ಮಂಜೇಶ್ವರ ಪಂಚಾಯತ್ ಒಳಪಟ್ಟ ಪೊಯ್ಯಕಂಡ ನಿವಾಸಿ ಅನಾರೋಗ್ಯದಿಂದ ಬಳಲುತ್ತಿರುವ ರತ್ನಾಕರ ಇವರ ಕಷ್ಟಗಳನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಯೋಜನೆಯ ಮೊತ್ತವನ್ನು ಫೆ.18ರಂದು ನ್ಯಾಯವಾದಿ ನವೀನ್ ರಾಜ್ ಹಸ್ತಾಂತರ ಮಾಡಿದರು.
ಈ ವೇಳೆ ಸುಜಾತ ಮಂಜೇಶ್ವರ, ಪ್ರವೀಣ್(ರಾಜು) ಕನಿಲ, ಸುಕೇಶ್ ಬೆಜ್ಜ, ಅಂಕಿತ್ ಪಾವೂರು, ರೂಪೇಶ್ ಜೋಡುಕಲ್ಲು, ಪ್ರದೀಪ್ ಮೊರತ್ತಣೆ ಉಪಸ್ಥಿತರಿದ್ದರು.