ಉಡುಪಿ: ಹೆರ್ಗಾ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಅನೇಕ ಧಾರ್ಮಿಕ ವಿಧಿ ವಿಧಾನಗಳು ಜರಗಿದವು. ದೇವರನ್ನು ಹೊತ್ತು ತಂದು ರಥದಲ್ಲಿಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ರಥೋತ್ಸವ ನಡೆಯಿತು.
ನೂರಾರು ಭಕ್ತಾದಿಗಳು ರಥ ಎಳೆದು ಸಂಭ್ರಮಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಆಕರ್ಷಕ ಸುಡು ಮದ್ದುಗಳ ಪ್ರದರ್ಶನ ನಡೇಯಿತು. ಇಲ್ಲಿನ ಜಾತ್ರೆಯಲ್ಲಿ ಹಚ್ಚಡ ಸೇವೆ ವಿಶೇಷ. ಸಾವಿರಾರು ಭಕ್ತಾದಿಗಳು ಹಚ್ಚಡ ಸೇವೆ ದೇವರಿಗೆ ಅರ್ಪಿಸಿದರು.