ಮಂಗಳೂರು: ಮಾ.1ರಿಂದ 3ರವರೆಗೆ ಜಾನಪದ ಕಡಲೋತ್ಸವ

Share with

ಮಂಗಳೂರು: ಕರ್ನಾಟಕ ಜಾನಪದ ಪರಿಷತ್, ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕದಳಿ ಬೀಚ್ ಟೂರಿಸಂ ಇವರ ಸಹಯೋಗದೊಂದಿಗೆ ಜಾನಪದ ಕಡಲೋತ್ಸವ ಕಾರ್ಯಕ್ರಮ ಪಣಂಬೂರು ಬೀಚ್‍ನಲ್ಲಿ ಮಾರ್ಚ್ 1ರಿಂದ 3ರ ವರೆಗೆ ನಡೆಯಲಿದೆ.

ಜಾನಪದ ಕಡಲೋತ್ಸವ ಕಾರ್ಯಕ್ರಮ ಪಣಂಬೂರು ಬೀಚ್‍ನಲ್ಲಿ ಮಾರ್ಚ್ 1ರಿಂದ 3ರ ವರೆಗೆ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ಜಾನಪದ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಚಾಲಕರಾದ ರಾಜೇಶ್ ಆಳ್ವ ಅವರು ಮಾರ್ಚ್ 1ರಂದು ಸಂಜೆ 6.30ಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮ ಉದ್ಘಾಟಿಸುವರು.

ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸುವರು. ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಾನಪದ ಕಡಲೋತ್ಸವ ಪ್ರಶಸ್ತಿ ಪ್ರದಾನ ಮತ್ತು 13 ಜಾನಪದ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 7.30ರಿಂದ ರಮೇಶ್ಚಂದ್ರ ಹಾಗೂ ಕಲಾವತಿ ದಯಾನಂದ ಬಳಗದಿಂದ ಜಾನಪದ ರಸಸಂಜೆ ಏರ್ಪಡಿಸಲಾಗಿದೆ‌ ಎಂದು ಹೇಳಿದರು

‘ಮಾರ್ಚ್‌ 2ರಂದು ಸಂಜೆ 5.30ರಿಂದ ವಿಚಾರ ಸಂಕಿರಣ ಮತ್ತು ಜಾನಪದ ಪರಿಷತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತಾಧಿಕಾರಿ ನಂದಕುಮಾರ್ ಹೆಗ್ಡೆ‌ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ. ಜಾನಪದ ವಿದ್ವಾಂಸ ಚಿನ್ನಪ್ಪ ಗೌಡ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಉಪನ್ಯಾಸಕಿ ಸಾಯಿ ಗೀತಾ ಮತ್ತು ದಯಾನಂದ ಕತ್ತಲ್‌ಸಾರ್ ಹಾಗೂ ರಂಗಕರ್ಮಿ ಮೈಮ್ ರಾಮ್‌ದಾಸ್ ವಿಚಾರ ಮಂಡಿಸಲಿದ್ದಾರೆ. ಸಂಜೆ 7.30ಕ್ಕೆ ಅಜಯ್ ವಾರಿಯರ್ ತಂಡದವರು ‘ಸಂಗೀತ ರಸ ಸಂಜೆ’ ನಡೆಸಿಕೊಡಲಿದ್ದಾರೆ’ ಎಂದು ಹೇಳಿದರು.

‘ಮಾರ್ಚ್‌ 3ರಂದು ಮಧ್ಯಾಹ್ನ 3ಕ್ಕೆ ಗಾಳಿಪಟ ಪ್ರದರ್ಶನ ಏರ್ಪಡಿಸಲಾಗಿದೆ. ಶಾಸಕ ವೇದವ್ಯಾಸ್ ಕಾಮತ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಜಾನಪದ ಮತ್ತು ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ. ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಾನಪದ ಪರಿಷತ್ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭದಲ್ಲಿ ಅಯೋಧ್ಯೆಯ ಬಾಲರಾಮ ವಿಗ್ರಹ ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ‘ಅಮರ ಶಿಲ್ಪಿ’ ಬಿರುದು ಪ್ರದಾನ ಮಾಡಲಾಗುತ್ತದೆ. ಸಂಜೆ 7.30ರಿಂದ ಮಣಿಕಾಂತ್ ಕದ್ರಿ ಬಳಗದವರಿಂದ ‘ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.


Share with

Leave a Reply

Your email address will not be published. Required fields are marked *