ಉಡುಪಿ: ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘ ಇವರ ಸಾರಥ್ಯದಲ್ಲಿ ‘ಶ್ರೀಗಂಧ ಉತ್ಸವ’ ನೂತನ ಉಡುಪಿ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಫೆ.26ರಂದು ನಡೆಯಿತು.
ಶ್ರೀಗಂಧದ ಗಿಡ ನೆಡುವ ಮೂಲಕ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ರಾಜ್ಯ ಸಂಘದ ಅಮರನಾರಾಯಣ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಸಂಘವನ್ನು ರಚಿಸಲಾಯಿತು.
ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಬಸ್ರೂರು ರಾಜೀವ ಶೆಟ್ಟಿ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಕಾಡೂರು, ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಕೊಕ್ಕರ್ಣೆ, ಕಾರ್ಯದರ್ಶಿಯಾಗಿ ಗಣನಾಥ್ ಎಕ್ಕಾರು, ಜೊತೆ ಕಾರ್ಯದರ್ಶಿಯಾಗಿ ಶುಭಾಷಿತ್ ಕುಮಾರ್, ಜೂಲಿಯಾನ, ಕೋಶಾಧಿಕಾರಿಯಾಗಿ ರಾಘವೇಂದ್ರ ರಾವ್, ಸದಸ್ಯರಾಗಿ ಸುಶಾಂತ್ ನಾಯಕ್, ರಿಕೇಶ್ ಪಾಲನ್ ಕಡೆಕಾರ್, ಗ್ರೆಗೋರಿಯ ಪಿಂಟೋ, ರತ್ನಾಕರ ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ಸುಭಾಷ್ ಚಂದ್ರ, ಸುಂದರ ಪೂಜಾರಿ ಅಧಿಕಾರ ವಹಿಸಿಕೊಂಡರು.