ಉಪ್ಪಳ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ವರ್ಕಾಡಿ ಕೂಟತ್ತಜೆ ನಿವಾಸಿಯೂ ಮಂಗಳೂರು ಕಂಕನಾಡಿಯ ವೆಲೆನ್ಸಿಯಾದಲ್ಲಿ ವಾಸಿಸುತಿದ್ದ ಆನಂದ ಜೋಗಿ [69] ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಇವರು ಮೀನುಗಾರಿಕಾ ಇಲಾಖೆಯ ನಿವೃತ ಉದ್ಯೋಗಿಯಾಗಿದ್ದರು. ಫೆ.25ರಂದು ಬೆಳಿಗ್ಗೆ ಮನೆಯಿಂದ ಹೊರಗಡೆ ತೆರಳಿದ್ದರು. ಆದರೆ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಕೂಟತ್ತಜೆಯಲ್ಲಿರುವ ಸಂಬಂಧಕರಿಗೆ ವಿಷಯ ತಿಳಿಸಿದ್ದಾರೆ. ಇದರಂತೆ ಸಂಬಂಧಿಕರು ಹುಡುಕಾಡುತ್ತಿರುವ ಮಧ್ಯೆ ಫೆ.26ರಂದು ಸಂಜೆ ಕೂಟತ್ತಜೆಯಲ್ಲಿ ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಆನಂದ ಜೋಗಿಯ ಮೃತದೇಹ ಪತ್ತೆಯಾಗಿದೆ.
ಬಳಿಕ ಮಂಜೇಶ್ವರ ಪೋಲೀಸರು ಹಾಗೂ ಉಪ್ಪಳ ಅಗ್ನಿಶಾಮಕ ದಳ ತಲುಪಿ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು ಪತ್ನಿ ವಸಂತಿ, ಮಕ್ಕಳಾದ ದೀಪಿಕ, ರೂಪಿಕ, ಅಳಿಯ ಮಧುಕರ, ಸಹೋದರರು-ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.