ಉಡುಪಿ: ರಾಜ್ಯಾದ್ಯಂತ ಕನ್ನಡ ಬೋರ್ಡ್ ಗಳ ಅಳವಡಿಕೆ ವಿಚಾರದಲ್ಲಿ ದೊಡ್ಡ ಹೋರಾಟವೇ ನಡೆದು ಹೋಗಿದೆ. ಕನ್ನಡಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ ಗಡುವು ಮುಕ್ತಾಯವಾಗಿದೆ.
ಫೆ.28ರ ಒಳಗೆ ಎಲ್ಲರೂ ಕನ್ನಡ ಬೋರ್ಡ್ ಅಳವಡಿಕೆ ಮಾಡಬೇಕು ಎಂದು ಸರ್ಕಾರವೇ ಆದೇಶ ಹೊರಡಿಸಿತ್ತು. ರಾಜ್ಯದ ಬಹುತೇಕ ಕಡೆಗಳಲ್ಲಿ ಈ ಆದೇಶವನ್ನು ಜನರು ಪಾಲಿಸುತ್ತಿಲ್ಲ. ಉಡುಪಿಯಲ್ಲೂ ಕೆಲವು ಕಟ್ಟಡಗಳು, ಮಳಿಗೆಗಳು, ಮಾಲ್ ಗಳು ಶೇಕಡಾ 40ರಷ್ಟು ಕನ್ನಡದಲ್ಲಿ ಬೋರ್ಡ್ ಗಳನ್ನು ಅಳವಡಿಕೆ ಮಾಡಿಲ್ಲ.
ಈ ಬಗ್ಗೆ ಸ್ಪಷ್ಟಿಕರಣ ನೀಡಿದ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಅವರು, ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಎಲ್ಲ ಕಡೆ ತೆರಳಿ ಕನ್ನಡ ಬೋರ್ಡ್ ಅಳವಡಿಸುವಂತೆ ಸೂಚನೆ ನೀಡುತ್ತಿದ್ದಾರೆ. ಕೆಲವರು ಇದನ್ನು ವಿರೋಧಿಸಿದ್ದು ಎಲ್ಲರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.