ಉಡುಪಿ: ಕನ್ನಡ ನಾಮಫಲಕ ಅಳವಡಿಕೆ; ಎಲ್ಲರ ಮನವೊಲಿಸುತ್ತೇವೆ: ಪೌರಾಯುಕ್ತ

Share with

ಉಡುಪಿ: ರಾಜ್ಯಾದ್ಯಂತ ಕನ್ನಡ ಬೋರ್ಡ್ ಗಳ ಅಳವಡಿಕೆ ವಿಚಾರದಲ್ಲಿ ದೊಡ್ಡ ಹೋರಾಟವೇ ನಡೆದು ಹೋಗಿದೆ. ಕನ್ನಡಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ ಗಡುವು ಮುಕ್ತಾಯವಾಗಿದೆ.

ಕನ್ನಡ ನಾಮಫಲಕ ಅಳವಡಿಕೆ ಕನ್ನಡ ಬೋರ್ಡ್ ಅಳವಡಿಸುವಂತೆ ಎಲ್ಲರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಪೌರಾಯುಕ್ತ ರಾಯಪ್ಪ ಅವರು ಹೇಳಿದ್ದಾರೆ.

ಫೆ.28ರ ಒಳಗೆ ಎಲ್ಲರೂ ಕನ್ನಡ ಬೋರ್ಡ್ ಅಳವಡಿಕೆ ಮಾಡಬೇಕು ಎಂದು ಸರ್ಕಾರವೇ ಆದೇಶ ಹೊರಡಿಸಿತ್ತು. ರಾಜ್ಯದ ಬಹುತೇಕ ಕಡೆಗಳಲ್ಲಿ ಈ ಆದೇಶವನ್ನು ಜನರು ಪಾಲಿಸುತ್ತಿಲ್ಲ. ಉಡುಪಿಯಲ್ಲೂ ಕೆಲವು ಕಟ್ಟಡಗಳು, ಮಳಿಗೆಗಳು, ಮಾಲ್ ಗಳು ಶೇಕಡಾ 40ರಷ್ಟು ಕನ್ನಡದಲ್ಲಿ ಬೋರ್ಡ್ ಗಳನ್ನು ಅಳವಡಿಕೆ ಮಾಡಿಲ್ಲ.

ಈ ಬಗ್ಗೆ ಸ್ಪಷ್ಟಿಕರಣ ನೀಡಿದ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಅವರು, ನಗರಸಭೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಎಲ್ಲ ಕಡೆ ತೆರಳಿ ಕನ್ನಡ ಬೋರ್ಡ್ ಅಳವಡಿಸುವಂತೆ ಸೂಚನೆ ನೀಡುತ್ತಿದ್ದಾರೆ. ಕೆಲವರು ಇದನ್ನು ವಿರೋಧಿಸಿದ್ದು ಎಲ್ಲರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *