ತಿರುವನಂತಪುರ: ಕಾಂಗ್ರೆಸ್ ನೇತಾರೆ ಪದ್ಮಜಾರ ಬೆನ್ನಲ್ಲೇ ಸಿಪಿಎಂ ನೇತಾರರೊಬ್ಬರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಸಿಪಿಎಂನ ಹಿರಿಯ ನೇತಾರನೂ, ಮಾಜಿ ದೇವಿಕುಳಂ ಶಾಸಕನಾದ ಎಸ್. ರಾಜೇಂದ್ರನ್ ಬಿಜೆಪಿಗೆ ಸೇರ್ಪ ಡೆಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ಪತ್ರಕರ್ತರೊಂದಿಗೆ ಮಾತನಾಡಿದ ಎಸ್ ರಾಜೇಂದ್ರನ್ ಅವರೇ ಇಂತಹ ಸೂಚನೆಯನ್ನು ನೀಡಿದ್ದಾರೆ. ತನ್ನ ವಿರುದ್ಧ ಸಿಪಿಎಂ ತೆಗೆದುಕೊಂಡಿರುವ ಅಮಾನತು ಕ್ರಮವನ್ನು ಹಿಂತೆಗೆದು ಕೊಳ್ಳದಿದ್ದರೆ ಕಠಿಣ ನಿಲುವು ಕೈಗೊಳ್ಳಬೇಕಾಗಿ ಬರಲಿದೆಯೆಂದು ಅವರು, ಪತ್ರಕರ್ತರೊಂದಿಗೆ ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ನೇತಾರ ಪಿ.ಕೆ. ಕೃಷ್ಣದಾಸ್ ಸಹಿತ ನೇತಾರರು ಮನೆಗೆ ತಲುಪಿ ಚರ್ಚೆ ನಡೆಸಿದ್ದಾರೆಂದೂ ಅವರುತಿಳಿಸಿದ್ದಾರೆ. ಈ ವಿಷಯವನ್ನು ಎಕೆಜಿ ಭವನಕ್ಕೆ ತಲುಪಿ ರಾಜ್ಯ ಕಾರ್ಯದರ್ಶಿಗೆ ತಿಳಿಸಿರುವುದಾಗಿ ಯೂ ಅಮಾನತು ಕ್ರಮವನ್ನು ಮುಂದುವರಿಸಿರುವುದು ಅಸಮಾಧಾನವಿದೆಯೆಂದು ರಾಜೇಂದ್ರನ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಸ್ಪರ್ಧಿಸುವ 12 ಮಂದಿ ಅಭ್ಯರ್ಥಿಗಳನ್ನು ಬಿಜೆಪಿ ಈಗಾಗಲೇ ಘೋಷಿಸಿರುತ್ತದೆ. ಇತರ ಅಭ್ಯರ್ಥಿ ಗಳ ಘೋಷಣೆ ಶೀಘ್ರ ನಡೆಯಲಿದೆ. ಈಗಾಗಲೇ ಘೋಷಿಸಿರುವ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.