ಉಪ್ಪಳ: ಮಾ.24ರಂದು ಕೊಂಡೆವೂರು ಆಶ್ರಮದಲ್ಲಿ ನವಗ್ರಹ ಪ್ರತಿಷ್ಟೆ ಹಾಗೂ ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಮತ್ತು ಅಖಂಡ ಭಜನಾ ಸಪ್ತಾಹ

Share with

ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಕೊಂಡೆವೂರು ಇಲ್ಲಿ ನವಗ್ರಹ ಪ್ರತಿಷ್ಟೆ ಹಾಗೂ ಲೋಕ ಕಲ್ಯಾಣರ್ಥವಾಗಿ ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಮತ್ತು 18ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಾರ್ಚ್ 24ರಂದು ನಡೆಯಲಿದೆ.

ನವಗ್ರಹ ಪ್ರತಿಷ್ಟೆ ಹಾಗೂ ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಮತ್ತು ಅಖಂಡ ಭಜನಾ ಸಪ್ತಾಹ

ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳವರ ನೇತೄತ್ವದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣರ ನಿರ್ದೇಶನದೊಂದಿಗೆ ಮತ್ತು ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಅಸ್ರಣ್ಣರವರ ಆಚಾರ್ಯತ್ವದಲ್ಲಿ ಯಾಗ ನಡೆಯಲಿದೆ.

ಇದರ ಅಂಗವಾಗಿ 23ರಂದು ಸಂಜೆ 4.30ಕ್ಕೆ ಉಪ್ಪಳ ಪೇಟೆಯಿಂದ ಹೊರೆಕಾಣಿಕೆ ಮೆರವಣಿಗೆ, ಸಂಜೆ 6ಕ್ಕೆ ವಿವಿಧ ವೈಧಿಕ ಕಾರ್ಯಕ್ರಮಗಳು.

24ರಂದು ಬೆಳಿಗ್ಗೆ 6ಕ್ಕೆ ಪ್ರಾರ್ಥನೆ, ಪುಣ್ಯಾಹ ವಾಚನ, ಆಚಾರ್ಯವರಣ, 7.30ಕ್ಕೆ ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಆರಂಭ, ಪೂರ್ವಾಹ್ನ 9.58ಕ್ಕೆ ನವಗ್ರ ಪ್ರತಿಷ್ಟೆ, 10.30ಕ್ಕೆ ಯತಿಶ್ರೇಷ್ಟರಿಗೆ ಪೂರ್ಣಕುಂಭ ಸ್ವಾಗತ, ಪರಮಪೂಜ್ಯ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದಂಗಳವರು, ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಸಂಸ್ಥನಮ್ ಅದಮಾರು ಮಠ, ಉಡುಪಿ, ಪರಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಎಡನೀರು ಮಠ, ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ, ಪರಮಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿ ಶ್ರೀ ಕ್ಷೇತ್ರದ ಕರಿಂಜೆ, 11ಕ್ಕೆ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, 11.30ಕ್ಕೆ ಯತಿವರ್ಯರುಗಳ ಸಾನಿದ್ಯದಲ್ಲಿ ನವಗ್ರಹ ಯಾಗದ ಪೂರ್ಣಾಹುತಿ, ಮಧ್ಯಾಹ್ನ 1ಕ್ಕೆ ಪ್ರಸನ್ನ ಮಹಾಪೂಜೆ, ಅನ್ನಸ‌ಂತರ್ಪಣೆ, ಅಪರಾಹ್ನ 2.30ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ, ಸಂಜೆ ಸೂರ್ಯಾಸ್ತ 6.39ಕ್ಕೆ ಭಜನಾ ಸಪ್ತಾಹದ ದೀಪ ಪ್ರಜ್ವಲನೆಯನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ನೆರವೇರಿಸುವರು. ಬಳಿಕ ನಕ್ಷತ್ರ ವನದಲ್ಲಿ ದೀಪೋತ್ಸವ, ಮಾ.31ರಂದು ಸಂಜೆ ಸೂರ್ಯಾಸ್ತ 6.40ಕ್ಕೆ ಭಜನಾ ಮಂಗಳಾಚರಣೆ ನಡೆಯಲಿದೆ.


Share with

Leave a Reply

Your email address will not be published. Required fields are marked *