ಮಂಜೇಶ್ವರ: ಕಾಸರಗೋಡು ಜಿಲ್ಲೆ ಮಂಜೇಶ್ವರ ಮಂಡಲದ ಎನ್ ಡಿ ಎ ಚುನಾವಣಾ ಕಛೇರಿ ಉಪ್ಪಳ ಭಗವತೀ ಗೇಟ್ ಸಮೀಪದ ಡಿ.ಎಸ್.ಸಿ.ಕಾಂಪ್ಲೆಕ್ಸ್ ನಲ್ಲಿ ಮಾ.9ರಂದು ಬೆಳಿಗ್ಗೆ ಭಾಜಪ ಜಿಲ್ಲಾಧ್ಯಕ್ಷರಾದ ಶ್ರೀ ರವೀಶ್ ತಂತ್ರಿ ಕುಂಟಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಲೋಕಸಭಾ ಅಭ್ಯರ್ಥಿ ಶ್ರೀಮತಿ ಅಶ್ವಿನಿ ಎಂ ಎಲ್, ರಾಜ್ಯ ಕೌನ್ಸಿಲ್ ಸದಸ್ಯರಾದ ರವೀಂದ್ರನ್, ರಾಜ್ಯ ಸಮಿತಿ ಸದಸ್ಯರಾದ ವಿ ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಪೂಕಟ್ಟೆ, ಸುಧಾಮ ಗೋಸಾಡ, ವಿಜಯ ಕುಮಾರ್ ರೈ, ಸುನಿಲ್ ಅನಂತಪುರ, ಆದರ್ಶ್ ಮಂಜೇಶ್ವರ, ವಸಂತ್ ಕುಮಾರ್ ಮಯ್ಯ, ಮಣಿಕಂಠ ರೈ,ಭರತ್ ರೈ, ಅನಿಲ್ ಮಣಿಯಂಪಾರೆ ಹಾಗೂ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.