ಸೋಂಕಾಲು ಪೇಟೆಯಲ್ಲಿ ಉರಿಯದ ಲೊಮಾಸ್ಟ್ ದೀಪ: ದುರಸ್ಥಿಗೊಳಿಲು ಒತ್ತಾಯ

Share with

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಸೋಂಕಾಲು ಪೇಟೆಯಲ್ಲಿ ಸ್ಥಾಪಿಸಲಾದ ಲೊಮಾಸ್ಟ್ ದೀಪ ಕೆಟ್ಟುಹೋಗಿ ವರ್ಷಗಳೇ ಕಳೆದರೂ ದುರಸ್ಥಿಗೆ ಕ್ರಮಕೈಗೊಳ್ಳದಿರುವುದರಿಂದ ಸಾರ್ವಜನಿಕರು ಸಮಸ್ಯೆಗೀಡಾಗಿದ್ದಾರೆ. ಕೊಡಂಗೆ, ಪ್ರತಾಪನಗರ, ಬಾಯಾರು ಕೈಕಂಬ ರಸ್ತೆಗಳು ಸಂಗಮಿಸುವ ಜನನಿಬಿಡ ಪ್ರದೇಶವಾದ ಸೋಂಕಾಲಿನಲ್ಲಿ ಕತ್ತಲೆ ಆವರಿಸಿಕೊಂಡಿದೆ. ಈ ಪ್ರದೇಷದಲ್ಲಿ ಹಲವು ಅಪಘಾತಗಳು ನಡೆದು ಹಲವರಿಗೆ ಗಾಯಗೊಂಡಿದೆ. ಓರ್ವ ಮೃತಪಟ್ಟ ಘಟನೆಯೂ ನಡೆದಿರುವುದಾಗಿ ಸ್ಥಳೀಯರು ದೂರಿದ್ದಾರೆ. ಈ ಪ್ರದೇಷದಲ್ಲಿ ಹಲವಾರು ವ್ಯಾಪರ ಸಂಸ್ಥೆಗಳು ಹೊಂದಿದೆ.  ಸ್ಥಳಿಯರು ಮಂಗಳೂರು ಸಹಿತ ವಿವಿಧ ಕಡೆಗೆ ಉದ್ಯೋಗಕ್ಕೆ ತೆರಳಿ ರಾತ್ರಿ ಮರಳುವ ಸಂದರ್ಭದಲ್ಲಿ ಕತ್ತಲೆ ಆವರಿಸಿಕೊಳ್ಳುತ್ತಿರುವ ಈ ಪ್ರದೇಶದಲ್ಲಿ ನಡೆದು ಹೋಗಲು ಆತಂಕಗೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಲೊಮಾಸ್ಟ್ ದೀಪ ಹಾಗೂ ಹೆದ್ದಾರಿ ರಸ್ತೆ ಬದಿಯಲ್ಲಿರುವ ದೀಪಗಳನ್ನು ದುರಿಸ್ಥಿಗೊಳಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. [ ಉರಿಯದ ಲೊಮಾಸ್ಟ್ ದೀಪ


Share with

Leave a Reply

Your email address will not be published. Required fields are marked *