ಉಡುಪಿ : ಗ್ಯಾಂಗ್ ವಾರ್ ಮತ್ತೋರ್ವ ಆರೋಪಿಯ ಬಂಧನ

Share with

ಉಡುಪಿ: ಉಡುಪಿ ಕುಂಜಿಬೆಟ್ಟು ರಾಷ್ಟ್ರೀಯ ಹೆದ್ದಾರಿ 169 (ಎ)ರಲ್ಲಿ ಮೇ 19ರಂದು ನಸುಕಿನ ವೇಳೆ ನಡು ರಸ್ತೆಯಲ್ಲಿಯೇ ನಡೆದ ಗ್ಯಾಂಗ್ ವಾರ್‌ಗೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸಕ್ಲೈನ್ ಎಂದು ಗುರುತಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಈಗಾಗಲೇ ಈ ಪ್ರಕರಣದಲ್ಲಿ ಕಾಪುವಿನ ಆಶಿಕ್ ಮತ್ತು ಗುಜ್ಜರಬೆಟ್ಟುವಿನ ರಾಕೀಬ್ ಎಂಬವರನ್ನು ಬಂಧಿಸಲಾಗಿತ್ತು. ಈ ಎರಡು ತಂಡಗಳಲ್ಲಿ ಒಟ್ಟು 7-8 ಮಂದಿ ಇದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದು ವರೆಸಿದ್ದಾರೆ. ಇವರೆಲ್ಲ ಗರುಡ ಗ್ಯಾಂಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗ್ಯಾಂಗ್ ಹೆಚ್ಚು ಸಕ್ರಿಯವಾಗಿಲ್ಲ. ಗ್ಯಾಂಗ್ ಒಳಗಿನ ದ್ವೇಷ ಹಾಗೂ ಒಳಜಗಳವೇ ಈ ದಾಳಿಗೆ ಕಾರಣ. ಈವರೆಗೆ ಒಟ್ಟು ಮೂವರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ


Share with

Leave a Reply

Your email address will not be published. Required fields are marked *