ಉಡುಪಿ: ಆವರಣ ಗೋಡೆ ಕುಸಿದು 3 ದ್ವಿಚಕ್ರ ವಾಹನ ಜಖಂ

Share with

ಉಡುಪಿ: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಉಡುಪಿ ನಗರದ ಹಳೆ ಬಸ್ ಸ್ಟ್ಯಾಂಡ್ ಸಮೀಪದ ಕೃಷ್ಣಾ ಕ್ಯಾಂಪೇಕ್ಸ್ ಶ್ರೀ ನಾಗದೇವರ ಸನ್ನಿಧಿಯ ಪಕ್ಕದ ಆವರಣದ ಗೋಡೆ ಕುಸಿದು 3 ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ. ಉಡುಪಿ ಬೋರ್ಡ್ ಶಾಲೆಯ ಆವರಣ ಗೋಡೆ ಕುಸಿದಿದ್ದು, ಯಾವುದೇ ಜೀವಹಾನಿಯಾದ ಬಗ್ಗೆ ವರದಿ ಯಾಗಿಲ್ಲ.
ರಾತ್ರಿಯಿಡಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು ಕೆಲವೆಡೆ ಮರಗಿಡಗಳು ಧರೆಗುರುಳಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.


Share with

Leave a Reply

Your email address will not be published. Required fields are marked *