ಕಣಿಯೂರು : ಶ್ರೀ ಶಂಕರ ಸೇವಾ ಪ್ರತಿಷ್ಠಾನ (ರಿ.) ಕೋಟೆಕಾರು, ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನಮ್ ಶೃಂಗೇರಿ ಮಠ, ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ವಲಯ ಇದರ ವತಿಯಿಂದ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಶಾಂಕರ ತತ್ತ್ವಪ್ರಸಾರ ಅಭಿಯಾನವು ನಡೆಯಿತು.
ಸಂಜೆ ಶ್ರೀ ಚಾಮುಂಡೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಪೂಜ್ಯ ಸ್ವಾಮೀಜಿ ಆಶೀರ್ವಚನ ನೀಡಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆದದ್ದು ಯೋಗ ಭಾಗ್ಯ ,
ಭಾರತದ ಆಧ್ಯಾತ್ಮಿಕ ಚಿಂತನೆಯ ಮೇರು ಪರ್ವತ , ಆಚಾರ್ಯ ಶಂಕರರ ತತ್ವ – ಚಿಂತನೆಗಳು ಸರ್ವರ ಬಾಳಿಗೆ ದಾರಿ ದೀಪವಾಗಲಿ , ಮುಂದಿನ ದಿನಗಳಲ್ಲಿ ಶ್ರೀ ಆಚಾರ್ಯ ಶಂಕರರ ಜನ್ಮ ದಿನಾಚರಣೆ ಅರ್ಥಬಧ್ದವಾಗಿ ಶ್ರೀ ಕ್ಷೇತ್ರದಲ್ಲಿ ಆಚರಿಸುವಂತಾಗಲಿ ಎಂದು ಆಶಿಸಿದರು.
ಧಾರ್ಮಿಕ ಚಿಂತಕ ಕೈಯ್ಯೂರು ನಾರಾಯಣ ಭಟ್ ಶಾಂಕರ ತತ್ತ್ವ ಅಭಿಯಾನದ ಉಪನ್ಯಾಸ ನೀಡಿ ಸನಾತನ ಹಿಂದೂ ಧರ್ಮದ ಉದ್ಧಾರಕ್ಕಾಗಿ ಅವತರಿಸಿದವರು, ಮೂರು ಬಾರಿ ಭಾರತದಾದ್ಯಂತ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಪಾದಯಾತ್ರೆ ಮಾಡುತ್ತಾ ಭಕ್ತಿ ಹಾಗೂ ಜ್ಞಾನ ಮಾರ್ಗದಿಂದ ಜೀವನ ನಡೆಸುವ ದಾರಿ ತೋರಿದವರು.
ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಪ್ರಧಾನ ಕಾರ್ಯದರ್ಶಿಗಳಾದ ರಾಜಾರಾಮ ಐತಾಳ್ ಕಂದೂರು ಇವರು ಅಷ್ಟೋತ್ತರ ವಾಚನ ಮಾಡಿದರು.
ವೇದಿಕೆಯಲ್ಲಿ ಸಂಚಾಲಕರಾದ ಎ. ಕೃಷ್ಣ ಶರ್ಮ ಬಿ. ಸಿ ರೋಡ್ , ಗೌರವ ಸಲಹೆಗಾರರಾದ ರಾಮಕೃಷ್ಣ ನಾಯಕ್ ಕೋಕಳ ಇವರು ಉಪಸ್ಥಿತರಿದ್ದರು .
ಹರ್ಷಿಕಾ ಕಣಿಯೂರು ಪ್ರಾರ್ಥಿಸಿದರು. ಚಂದ್ರಶೇಖರ ಕಣಿಯೂರು ಸ್ವಾಗತಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.