ಮರ ಮುರಿದು ಬಿದ್ದು ಎರಡು ಅಟೋರಿಕ್ಷಾ ಹಾಗೂ ಗೂಡಂಗಡಿ ಹಾನಿ: ಜನರು ಅಪಾಯದಿಂದ ಪಾರು

Share with

ಉಪ್ಪಳ: ಮಳೆಗೆ  ಬೃಹತ್ ಮರ ಮುರಿದು ಬಿದ್ದು ನಿಲ್ಲಿಸಿದ್ದ ಎರಡು ಅಟೋರಿಕ್ಷಾ ಹಾಗೂ ಗೂಡಂಗಡಿ ಹಾನಿಗೊಂಡಿದ್ದು, ಸ್ಥಳೀಯರು  ಅಪಾಯದಿಂದ ಪಾರಾಗಿದ್ದಾರೆ.       ಮಂಗಳವಾರ ಮಧ್ಯಾಹ್ನ ಸುಮಾರು ೨.೩೦ರ ವೇಳೆ ನಯಬಜಾರ್‌ನಲ್ಲಿರುವ  ತಾಲೂಕು ಆಸ್ಪತ್ರೆ ಬಳಿಯ ಸರ್ವೀಸ್ ರಸ್ತೆ ಪರಿಸರದಲ್ಲಿ ಈ ಘಟನೆ ನಡೆದಿದೆ. ಅಂಬಾರು ನಿವಾಸಿ ಮೊಯಿದೀನ್ ಹಾಗೂ ಪಾರಕಟ್ಟೆ ನಿವಾಸಿ ಅಬ್ಬಾಸ್ ಎಂಬವರ ಅಟೋರಿಕ್ಷಾ ಹಾಗೂ ದಯಾನಂದ ಎಂಬವರ ಗೂಡಂಗಡಿ ಹಾನಿಗೊಂಡಿದೆ. ಮೊಯಿದೀನ್ ರವರ ರಿಕ್ಷಾ ಪೂರ್ತಿ ನುಜ್ಜಾಗಿದೆ.  ಜೋರಾಗಿ ಮಳೆ ಹಾಗೂ ಗಾಳಿ ಈ ವೇಳೆ ಬೀಸಿರುವುದರಿಂದ ಮರ ಮುರಿದು ಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇನ್ನಿತರ ಹಲವು ಅಟೋರಿಕ್ಷಾ , ಬೈಕ್ ಈ ಪರಿಸರದಲ್ಲಿ ನಿಲ್ಲಿಸಲಾಗಿತ್ತು ಅಪಾಯ ತಪ್ಪಿದೆ.   ಸ್ಥಳಕ್ಕೆ ಉಪ್ಪಳ ಅಗ್ನಿಶಾಮಕ ದಳ ತಲುಪಿ ಕ್ರೆöÊನ್ ಮೂಲಕ ಮರವನ್ನು ಮೇಲೆತ್ತಿ  ಕಡಿದು ತೆರವುಗೊಳಿಸಲಾಗಿದೆ. [


Share with

Leave a Reply

Your email address will not be published. Required fields are marked *