ಉಪ್ಪಳ : ಶ್ರೀ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರಿನಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಬೆಳಗ್ಗಿನ ಪ್ರರ‍್ಥನೆಯೊಂದಿಗೆ ಕರ‍್ಯಕ್ರಮವು ಆರಂಭವಾಯಿತು. ಶಾಲಾಸಂಸ್ಥಾಪಕರಾದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಆಶೀರ್ವಾಚನದಲ್ಲಿ ದಿನದ ಮಹತ್ಚವನ್ನು ತಿಳಿಸುತ್ತಾ ವಿದ್ಯರ‍್ಥಿಗಳು ಪ್ರತಿ ದಿನವನ್ನು ಪರಿಸರ ದಿನವಾಗಿ ಆಚರಿಸಿದರೆ ಮಾತ್ರ ಮುಂದಿನ ಪೀಳಿಗೆಗಾಗಿ ನಮ್ಮ ಭೂಮಿಯನ್ನು ನೀಡಬಹುದಾಗಿದೆ, ಹಾಗೆಯೇ ದಿನೇ ದಿನೇ ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಬೇಕು ಅಲ್ಲದೆ ನಾವೆಲ್ಲ ಬಳಸಿದ ಕಾಗದಗಳನ್ನು ಪುನರ್ ಬಳಕೆ ಮಾಡಲು ಪ್ರಯತ್ನಿಸಿದರೆ ಮಾತ್ರ ಮುಂದಿನ ತಲೆಮಾರು ಪ್ರಕೃತಿಯನ್ನು ಬಳಕೆಮಾಡಲು ಸಾಧ್ಯ ಎಂದು ಹೇಳಿದರಲ್ಲದೆ ವಿದ್ಯಾರ್ಥಿಗಳಲ್ಲಿ ಪರಿಸರಸಂರಕ್ಷಣೆಯ ಪ್ರತಿಜ್ಞೆಯನ್ನು ಹೇಳಿಸಿದರು. ಪೂಜ್ಯ ಶ್ರೀಗಳ ದಿವ್ಯ ಹಸ್ತದಲ್ಲಿ ವಿತರಿಸಿದ ಮಾವಿನ ಬೀಜವನ್ನು ವಿದ್ಯಾರ್ಥಿಗಳು ಬಿತ್ತನೆ ಮಾಡಿದರು.ಶಾಲಾ ವಿದ್ಯಾರ್ಥಿ ಚಿನ್ಮಯ್ ಪರಿಸರ ದಿನದಕುರಿತು ಭಾಷಣವನ್ನು ಮಾಡಿದನು. ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ರ‍್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿಯ ಶೈಕ್ಷಣಿಕ ಪ್ರಮುಖರಾದ ಸುಧಾಕರ್ ಯನ್, ಶಾಲಾ ಆಡಳಿತಾಧಿಕಾರಿ ಕಮಾಲಕ್ಷ ಎಮ್ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ರೇಖಾ ಪ್ರದೀಪ್ ಅವರು ಪರಿಸರ ದಿನದ ಮಹತ್ವವನ್ನು ತಿಳಿಸಿದರು.ಶಾಲಾ ಶಿಕ್ಷಕಿ ಕುಮಾರಿ ಚೈತನ್ಯ ಸ್ವಾಗತಿಸಿ ಶ್ರೀಮತಿ ಅಶ್ವಿತ ವಂದಿಸಿದರು. ಶ್ರೀಮತಿ ಸೌಮ್ಯ ಕರ‍್ಯಕ್ರಮದ ನಿರೂಪಣೆಯನ್ನು ಮಾಡಿದರು.