ಶಾಲಾ ಪ್ರವೇಶೋತ್ಸವ ಕೊಂಡೆವೂರು ವಿದ್ಯಾಪೀಠದಲ್ಲಿ

Share with

ಉಪ್ಪಳ: ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರಿನಲ್ಲಿ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿAದ ನಡೆಯಿತು. ವಿದ್ಯಾರ್ಥಿಗಳು , ಶಿಕ್ಷಕರು ಹಾಗೂ ಹೆತ್ತವರು, ಆಡಳಿತ ಸಮಿತಿಯ ಸದಸ್ಯರು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಸೇರಿದರು . ಅಲ್ಲಿ ಶೈಕ್ಷಣೆಕ ವರ್ಷವು ಸುಗಮವಾಗಿ ಸಾಗುವಂತೆ ಪರಮಪೂಜ್ಯ ಶ್ರೀ ಗುರುಗಳು ಶ್ರೀ ಗಾಯತ್ರೀ ದೇವಿ ಹಾಗೂ ನಿತ್ಯಾನಂದ ಗುರುಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಚೆಂಡೆ ಹಾಗೂ ಘೋಷದೊಂದಿಗೆ ಮೆರವಣಿಗೆಯ ಮೂಲಕ ಶಾಲೆಗೆ ಪ್ರವೇಶಿಸಲಾಯಿತು. ಬೆಳಿಗ್ಗೆ ೯.೩೦ ಕ್ಕೆ ವಿದ್ಯಾಪೀಠದಲ್ಲಿ ಗಣಹೋಮ ದ ಪೂರ್ಣಾಹುತಿ ನಡೆಯಿತು. ವಿದ್ಯಾರ್ಥಿಗಳು ಭಜನೆ ಮತ್ತು ಪ್ರಾರ್ಥನೆಯನ್ನು ನಡೆಸಿ ಕೊಟ್ಟರು. ವಿದ್ಯಾಪೀಠದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಯವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ದೈನಂದಿನ ಮಾಡಬೇಕಾದ ಕರ್ತವ್ಯಗಳು, ಪಾಲಿಸಬೇಕಾದ ನೀತಿ ನಿಯಮಗಳ ಕುರಿತು ಹೇಳುತ್ತಾ ಭಾರತ ಮಾತೆಯ ಹೆಮ್ಮೆಯ ಪುತ್ರರಾಗಿ ಬಾಳಿ ಎಂದು ಆಶೀರ್ವಚಿಸಿದರು. ಹೆತ್ತವರಿಗೆ ತಮ್ಮ ಮಕ್ಕಳನ್ನು ಕುಂತಿ ಪಾಂಡವರನ್ನು ಬೆಳೆಸಿದ ಹಾಗೆ ಬೆಳೆಸಬೇಕೆಂದು ಸೂಚಿಸಿದರು. ಶಾಲೆಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಹಣತೆಯನ್ನು ಬೆಳಗಿಸಿದರು . ಸಂಸ್ಥೆಯ ಆಡಳಿತ ಕಮಿಟಿಯ ಸದಸ್ಯರಾದ ಸುಧಾಕರ್ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು. ಶಾಲೆಯ ಆಡಳಿತಾಧಿಕಾರಿ ಕಮಲಾಕ್ಷ ಯಂ ವಿದ್ಯಾರ್ಥಿಗಳು ಅನುಸರಿಸಬೇಕಾದ ಶಾಲೆಯ ನಿಯಾಮಳಿಗಳ ಕುರಿತು ಮಾಹಿತಿಯನ್ನು ನೀಡಿದರು. ಶಾಲಾ ಪ್ರಾಂಶುಪಾಲರಾದ ರೇಖಾ ಪ್ರದೀಪ್ ಸ್ವಾಗತಿಸಿ ಶಿಕ್ಷಕಿ ಸ್ವಾತಿ ಪ್ರದೀಪ್ ವಂದಿಸಿದರು ಮಲ್ಲಿಕ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಧ್ಯಾಹ್ನ ಸಿಹಿ ಭೋಜನವನ್ನು ನೀಡುವ ಮೂಲಕ ಶಾಲಾ ಪ್ರವೇಶೋತ್ಸವವು ಮುಕ್ತಾಯಗೊಂಡಿತು.


Share with

Leave a Reply

Your email address will not be published. Required fields are marked *