ನವದೆಹಲಿ, ನವೆಂಬರ್ 6: ಕಳೆದ ವಾರ ಅಂತ್ಯಗೊಂಡ ಒಂದು ತಿಂಗಳ ಭರ್ಜರಿ ಹಬ್ಬದ ಸೀಸನ್ನಲ್ಲಿ ಭಾರತದಲ್ಲಿ ಭರ್ಜರಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ. ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಈ ಅವಧಿಯಲ್ಲಿ ಶೇ. 20ಕ್ಕಿಂತಲೂ ಹೆಚ್ಚು ವ್ಯಾಪಾರ ವಹಿವಾಟು ನಡೆದಿದೆ ಎನ್ನಲಾಗಿದೆ. ದಿ ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಒಂದು ತಿಂಗಳ ಹಬ್ಬದ ಸೀಸನ್ನಲ್ಲಿ ಮೆಟ್ರೋವೇತರ ನಗರಗಳ ಗ್ರಾಹಕರು ಹೆಚ್ಚು ಪಾಲ್ಗೊಂಡಿದೆ. ಇದು ಅಚ್ಚರಿಯ ಸಂಗತಿ. ಸಾಮಾನ್ಯವಾಗಿ ಪ್ರಮುಖ ನಗರಗಳ ನಿವಾಸಿಗಳು ಇ-ಕಾಮರ್ಸ್ ಸೈಟ್ಗಳಲ್ಲಿ ಹೆಚ್ಚು ಶಾಪಿಂಗ್ ಮಾಡುತ್ತಾರೆ.
ಇ-ಕಾಮರ್ಸ್ ಕನ್ಸಲ್ಟೆನ್ಸಿ ಸಂಸ್ಥೆಯಾ ಡಾಟಮ್ ಇಂಟೆಲಿಜೆನ್ಸ್ ಮಾಡಿರುವ ಅಂದಾಜು ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಒಂದು ಲಕ್ಷ ಕೋಟಿ ರೂ ವ್ಯಾಪಾರ ಮಾಡಿವೆ. ಹಿಂದಿನ ವರ್ಷಗಳಲ್ಲಿ ಇದೇ ಅವಧಿಯಲ್ಲಿ ನಡೆದ ವಹಿವಾಟು ಪ್ರಮಾಣ 81,000 ಕೋಟಿ ರೂ ಮತ್ತು 69,800 ಕೋಟಿ ರು ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಒಂದು ತಿಂಗಳಲ್ಲಿ ವ್ಯಾಪಾರ ವಹಿವಾಟು ಒಂದು ಲಕ್ಷ ಕೋಟಿ ರೂ ದಾಟಿರುವುದು.
ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಮತ್ತು ಅಮೇಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ನ ಆಫರ್ಗಳು ಇಕಾಮರ್ಸ್ ಪ್ಲಾಟ್ಫಾರ್ಮ್ಗಳಿಗೆ ಸಾಕಷ್ಟು ಗ್ರಾಹಕರನ್ನು ಸೆಳೆದಿವೆ. ಇವೆರಡು ಪ್ಲಾಟ್ಫಾರ್ಮ್ಗಳಲ್ಲೇ 55,000 ಕೋಟಿ ರೂ ಮೊತ್ತದ ವ್ಯಾಪಾರವಾಗಿದೆ.
ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಅತಿಹೆಚ್ಚು ಮಾರಾಟವಾದ ವಸ್ತುಗಳಲ್ಲಿ ನಿರೀಕ್ಷೆಯಂತೆ ಸ್ಮಾರ್ಟ್ಫೋನ್ಗಳು ಅಗ್ರಸ್ಥಾನ ಪಡೆದಿವೆ. ದೇಶದಲ್ಲಿ ಈ ಹಬ್ಬದ ಸೀಸನ್ನಲ್ಲಿ ನಡೆದ ಒಟ್ಟಾರೆ ಸ್ಮಾರ್ಟ್ಫೋನ್ ವ್ಯಾಪಾರದಲ್ಲಿ ಆನ್ಲೈನ್ನ ಪಾಲು ಶೇ. 65ರಷ್ಟಂತೆ. ಉನ್ನತ ಮಟ್ಟದ ಆಂಡ್ರಾಯ್ಡ್ ಫೋನ್ಗಳಿಗೆ ಹೆಚ್ಚು ಬೇಡಿಕೆ ಇತ್ತು ಎಂದೆನ್ನಲಾಗಿದೆ.