ಶ್ರೀಮದೆಡನೀರು ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನವನ್ನು ಹಾನಿಗೊಳಿಸಿರುವ ವಿಚಾರ ಬಹಳ ಖೇದಕರ ಮತ್ತು ಖಂಡನೀಯ. ಸಮಾಜದ ಎಲ್ಲಾ ವರ್ಗದವರನ್ನು ಅತ್ಯಂತ ಪ್ರೀತಿಯಿಂದ ಕಾಣುವ ಪೂಜ್ಯರಿಗೆ ಈ ರೀತಿಯ ಪೀಡನೆ ಸಮಾಜದ ಅಸ್ವಾಸ್ಥö್ಯದ ಲಕ್ಷಣ. ಸಂಬAಧಪಟ್ಟ ಇಲಾಖೆ ಶೀಘ್ರ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಸಮಾಜದ ಸ್ವಾಸ್ಥö್ಯವನ್ನು ಕಾಯ್ದುಕೊಳ್ಳಬೇಕೆಂದು ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಗ್ರಹಿಸಿದ್ದಾರೆ.