ಉಜಿರೆಯ SDM ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ಧರ್ಮಸ್ಥಳ ಭಕ್ತರ ಹಕ್ಕೊತ್ತಾಯ ಸಮಾವೇಶ ನಡೆಯುತ್ತಿದ್ದು, ಧರ್ಮಸ್ಥಳದ ಅಪಪ್ರಚಾರದ ಬಗ್ಗೆ ಭಕ್ತ ಸಮೂಹ ಸಿಡಿದೆದ್ದಿದೆ. ವಿರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಬಾರದು ಎಂದು ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದಿಂದ ಹಕ್ಕೊತ್ತಾಯ ಸಭೆ ನಡೆಯುತ್ತಿದೆ. ಈ ಸಮಾವೇಶಕ್ಕೆ ನ್ಯಾಯ ಕೇಳಿ ಸೌಜನ್ಯ ತಾಯಿ ಕೂಡ ಬಂದಿದ್ದು, “ಜಸ್ಟೀಸ್ ಫಾರ್ ಸೌಜನ್ಯ” ಎಂಬ ಭಿತ್ತಿಪತ್ರ ಹಿಡಿದು ಬಂದ ತಾಯಿ ಕುಸುಮಾವತಿಯನ್ನು ವೇದಿಕೆಗೆ ತೆರಳದಂತೆ ಪೊಲೀಸರು ತಡೆದಿರುವ ಘಟನೆ ಇಂದು ನಡೆದಿದೆ.
ನನ್ನ ಕುಟುಂಬ ಧರ್ಮಸ್ಥಳದ ವಿರುದ್ಧ ಇಲ್ಲ. ಸೌಜನ್ಯ ಹತ್ಯೆಗೈದ ಆರೋಪಿಗಳನ್ನು ಬಂಧಿಸಬೇಕು. ಇಂದಿನ ಈ ಸಮಾವೇಶ ಸೌಜನ್ಯಗೆ ನ್ಯಾಯ ಸಿಗುವ ಬಗ್ಗೆ ಆಗಬೇಕಿತ್ತು. ಆದರೆ ಅದಾಗಲಿಲ್ಲ ಎಂದಿದ್ದಾರೆ ಸೌಜನ್ಯ ತಾಯಿ ಕುಸುಮಾವತಿ. ಈ ಮೂಲಕ ವೀರೇಂದ್ರ ಹೆಗ್ಗಡೆ ಪರ ನಡೆಯುತ್ತಿರೋ ಸಮಾವೇಶಕ್ಕೆ ಕುಸುಮಾವತಿ ಬೆಂಬಲ ಸೂಚಿಸಿದ್ದಾರೆ.
ನ್ಯಾಯ ಕೇಳಿ ವೇದಿಕೆ ಬಳಿ ಬಂದಾಗ ಪೊಲೀಸರು ತಡೆದಿಡ್ಡು. ಅದರಿಂದ ವೇದಿಕೆ ಕೆಳಗೆ ನಿಂತ ಸೌಜನ್ಯ ತಾಯಿ ಮತ್ತು ಸಹೋದರಿ ಹಾಗೂ ಕುಟುಂಬಸ್ಥರು. ಸುತ್ತಮುತ್ತ ಅಪಪ್ರಚಾರ ವಿರುದ್ದ ಧರ್ಮಸ್ಥಳದ ಭಕ್ತರು ದಿಕ್ಕಾರ ಕೂಗಿದ್ದು. ವೇದಿಕೆ ಕಾರ್ಯಕ್ರಮ ಮುಕ್ತಾಯದ ಬಳಿಕ ಪೊಲೀಸರು ಸೌಜನ್ಯ ತಾಯಿಯನ್ನು ಕರೆದೊಯ್ದರು.
ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದಿಂದ ಹಕ್ಕೊತ್ತಾಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಬೆಳ್ತಂಗಡಿಯ ಬಿಜೆಪಿ ಶಾಸಕರಾದ ಹರೀಶ್ ಪೂಂಜಾ, ಎಂಎಲ್ಸಿಗಳಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್ ಸೇರಿ ಕ್ಷೇತ್ರದ ಪ್ರಮುಖರು ಭಾಗಿಯಾಗಿ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.