ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ ಸಿನಿಮಾ ಡಿ. 1 ರಂದು ತೆರೆಗೆ ಅಪ್ಪಳಿಸಲಿದೆ. ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.
‘ಇದು ವಿಭಿನ್ನ ಚಿತ್ರವಾಗಿದ್ದು, ನನ್ನ ಲಕ್ಕಿ ತಿಂಗಳಿನಲ್ಲೇ ರಿಲೀಸ್ ಆಗುತ್ತಿರುವುದು ಖುಷಿ ಇಮ್ಮಡಿಗೊಳಿಸಿದೆ. ನಾನು ನಟಿಸಿದ ಮೊದಲ ಸಿನಿಮಾ ಕಿರಿಕ್ ಪಾರ್ಟಿ, ಪುಷ್ಪ, ಚಮಕ್, ಅಂಜನಿಪುತ್ರ ಸಿನಿಮಾ ಡಿಸೆಂಬರ್ನಲ್ಲೇ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿದ್ದವು’ ಎಂದು ಹೇಳುವ ಮೂಲಕ ತಮ್ಮ ಯಶಸ್ಸಿನ ರಹಸ್ಯ ಬಹಿರಂಗಗೊಳಿಸಿದ್ದಾರೆ.