ರಜಿನಿಗಿಂತಲೂ ಶಿವಣ್ಣನ ಆಕ್ಟಿಂಗ್ ಚಿಂದಿ, ಕನ್ನಡ ನಿರ್ದೇಶಕರೇ ಕಲಿಯಿರಿ ಎಂದ ತಮಿಳು ಪ್ರೇಕ್ಷಕ!

Share with

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ ಜೈಲರ್ ಬಿಡುಗಡೆಯಾಗಿದೆ. ಕಳೆದ ಅಣ್ಣಾತ್ತೆ ಸಿನಿಮಾದ ಮೂಲಕ ಹೀನಾಯವಾಗಿ ಸೋಲನ್ನು ಕಂಡಿದ್ದ ರಜನಿಕಾಂತ್ ಬೀಸ್ಟ್ ಚಿತ್ರದ ಮೂಲಕ ನೆಲ ಕಚ್ಚಿದ್ದ ನಿರ್ದೇಶಕ ನೆಲ್ಸನ್ ಜತೆ ಕೈ ಜೋಡಿಸಿದ್ದು, ಜೈಲರ್ ಅವತಾರ ತಾಳಿ ಅಭಿಮಾನಿಗಳು ಹಾಗೂ ಸಿನಿ ರಸಿಕರ ಮುಂದೆ ಬಂದಿದ್ದಾರೆ.

ಇನ್ನು ಇಂದು ಸೂರ್ಯ ಉದಯಿಸುವ ಮುನ್ನವೇ ಜೈಲರ್ ಬೆಳ್ಳಿತೆರೆಗೆ ಅಪ್ಪಳಿಸಿದ್ದು ರಜನಿಕಾಂತ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಮುಂಗಡವಾಗಿ ಟಿಕೆಟ್ ಖರೀದಿಸಿ ಕಾದು ಚಿತ್ರ ವೀಕ್ಷಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಸಿಂಪಲ್ ಕಾಮನ್ ಮ್ಯಾನ್ ಮುತ್ತುವೇಲ್ ಆಗಿ ಕಾಣಿಸಿಕೊಳ್ಳುವ ರಜನಿಕಾಂತ್ ದ್ವಿತೀಯಾರ್ಧದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ.

ಚಿತ್ರ ವೀಕ್ಷಿಸಿ ಹೊರ ಬಂದ ಪರಭಾಷಾ ಸಿನಿ ರಸಿಕರು ಶಿವಣ್ಣನ‌ ಮಾಸ್ ನಟನೆಯನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಾಡಿ ಹೊಗಳಿದ್ದಾರೆ. ಚಿತ್ರ ವೀಕ್ಷಿಸಿ ಶಿವಣ್ಣನ ನಟನೆಗೆ ಫಿದಾ ಆಗಿರುವ ರಜನಿ‌ ಹಾಗೂ ಪವನ್ ಕಲ್ಯಾಣ್ ಅಭಿಮಾನಿ ಶಿವಣ್ಣನ ನಟನೆ ಕುರಿತು ಸಾಮಾಜಿಕ‌ ಜಾಲತಾಣದಲ್ಲಿ ಬರೆದುಕೊಂಡಿದ್ದು “ರಜನಿಕಾಂತ್ ಅವರನ್ನು ತೆರೆ ಮೇಲೆ ಯಾರಾದರೊಬ್ಬ ನಟ ಹಿಂದಿಕ್ಕಲಿದ್ದಾರೆ ಎಂದು ನಾನು ನನ್ನ ಕನಸಿನಲ್ಲಿಯೂ ಸಹ ಊಹಿಸಿರಲಿಲ್ಲ. ಆದರೆ ಕ್ಲೈ ಮ್ಯಾಕ್ಸ್‌ಗೂ ಮುಂಚೆ ಬರುವ ದೃಶ್ಯದಲ್ಲಿ ಶಿವಣ್ಣ ರಜನಿಕಾಂತ್ ಅವರನ್ನು ಹಿಂದಿಕ್ಕಿದ್ದಾರೆ.‌ ನಾನು ಶಿವಣ್ಣನ ಅಭಿಮಾನಿಯಾಗಿಬಿಟ್ಟೆ ಎಂದೆನಿಸುತ್ತೆ” ಎಂದು ಬರೆದುಕೊಂಡಿದ್ದಾರೆ‌.

ಮತ್ತೋರ್ವ ಸಿನಿ ರಸಿಕ ಜೈಲರ್ ಚಿತ್ರದಲ್ಲಿ ಶಿವಣ್ಣ ಅವರನ್ನು ನಿರ್ದೇಶಕ ನೆಲ್ಸನ್ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿರುವುದರ ಬಗ್ಗೆ ಹೊಗಳಿ ಬರೆದುಕೊಂಡಿದ್ದಾರೆ‌. ಕನ್ನಡ ನಿರ್ದೇಶಕರಿಗಿಂತ ಚೆನ್ನಾಗಿ ಶಿವಣ್ಣ ಅವರನ್ನು ನೆಲ್ಸನ್ ತೆರೆ ಮೇಲೆ ತೋರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ‌. ಈ ರೀತಿಯ ಅಭಿಪ್ರಾಯವನ್ನು ಹಲವಾರು ಸಿನಿ ರಸಿಕರು ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ಸಿನಿ ರಸಿಕ ಶಿವಣ್ಣನ ನಟನೆಯನ್ನು ಹೊಗಳಿದ್ದು ಇಂಥ ಪ್ರತಿಭೆ ಇಷ್ಟು ದಿನಗಳವರೆಗೆ ಕೇವಲ‌ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿತ್ತು ಎಂಬುದು ಬೇಸರದ ಸಂಗತಿ ಎಂದೂ ಸಹ ಬರೆದುಕೊಂಡಿದ್ದಾರೆ‌.


Share with

Leave a Reply

Your email address will not be published. Required fields are marked *