ತಮಿಳು ಚಿತ್ರರಂಗದ ಹಿರಿಯ ನಟ ಸತ್ಯರಾಜ್ ಅವರ ತಾಯಿ ನಿಧನರಾಗಿದ್ದಾರೆ. ನಾಥಂಬಳ್ ಕಾಳಿಂಗರಾಯರ್ (94) ವಯೋಸಹಜ ಕಾಯಿಲೆಯಿಂದ ಕೊಯಮತ್ತೂರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಹೈದರಾಬಾದ್‌ನಲ್ಲಿ ಶೂಟಿಂಗ್‌ನಲ್ಲಿದ್ದ ಸತ್ಯರಾಜ್, ತಾಯಿಯ ಸಾವಿನ ಸುದ್ದಿ ತಿಳಿದ ತಕ್ಷಣ ಕೊಯಮತ್ತೂರಿಗೆ ಧಾವಿಸಿದರು. ನಾಥಂಬಳ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ. ಹಿರಿಯ ನಟನ ತಾಯಿಯ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರದ ಮೂಲಕ ಸತ್ಯರಾಜ್ ಫೇಮಸ್ ಆಗಿದ್ದಾರೆ.