ಮಂಗಳೂರು: ಯುವವಾಹಿನಿ ಅಂತ‌ರ್ ಘಟಕದ ಕುಣಿತ ಭಜನಾ ಸ್ಪರ್ಧೆ | “ಕುಣಿದು ಭಜಿಸಿರೋಭಾವ-ಗಾನ-ಕುಣಿತ”

Share with

ಮಂಗಳೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆತಿಥ್ಯದಲ್ಲಿ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ ಇವರ ಆಶ್ರಯದಲ್ಲಿ ಮತ್ತು
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಸಹಯೋಗದೊಂದಿಗೆ ಯುವವಾಹಿನಿ ಅಂತ‌ರ್ ಘಟಕ ಕುಣಿತ ಭಜನಾ ಸ್ಪರ್ಧೆ “ಕುಣಿದು ಭಜಿಸಿರೋ ಭಾವ-ಗಾನ-ಕುಣಿತ” ಆ.13ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೊರಗಪ್ಪ ಸಭಾಭವನದಲ್ಲಿ ನಡೆಯಿತು.

ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಎಚ್ ಎಸ್ ಸಾಯಿರಾಮ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮಗಳ ಜೊತೆ ಧಾರ್ಮಿಕ ಚಿಂತನೆಯನ್ನು ಜನಮಾನಸದಲ್ಲಿ ಮೂಡಿಸುವ ವಿನೂತನ ಕುಣಿತ ಭಜನಾ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬರಲೆಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಸರಸ್ವತಿ ಎಸ್ ಕೆ ಇವರು ವಹಿಸಿದ್ದರು.
ಮುಖ್ಯ ಆತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾವ್ ಬ್ರದರ್ಸ್ ಕ್ಯಾಟರಿಂಗ್ ಸುರತ್ಕಲ್ ಇದರ ಮಾಲಕ ಭಾಸ್ಕರ್ ರಾವ್ ಇಂದಿನ ಡಿಜಿಟಲ್ ಯುಗದಲ್ಲಿರುವ ನಾವು ಹಿಂದಿನ ಸಂಸ್ಕೃತಿಯನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಭಜನಾ ಕಾರ್ಯಕ್ರಮವು ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.
ಭಜನೆಯಿಂದ ಜೀವನದಲ್ಲಿ ಆದ ಬದಲಾವಣೆಯ ಒಂದು ಉದಾಹರಣೆಯನ್ನು ನೀಡಿದರು. ಯುವವಾಹಿನಿಯ ಈ ರೀತಿಯ ಚಿಂತನೆಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಈ ಕಾರ್ಯಕ್ರಮವು ನಿರಂತರವಾಗಿ ನಡೆಯಲಿ ಎಂದು ಶುಭ ಕೋರಿದರು.

ವೇದಿಕೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ. , ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ, ಕೇಂದ್ರ ಸಮಿತಿಯ ಕಲೆ ಮತ್ತು ಸಾಹಿತ್ಯ ನಿರ್ದೇಶಕ ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಮಹಿಳಾ ಘಟಕದ ಕಾರ್ಯದರ್ಶಿ ಕಸ್ತೂರಿ ಮಹೇಶ್ , ಮಹಿಳಾ ಘಟಕದ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ನೈನಾ ವಿಶ್ವನಾಥ್ ಉಪಸ್ಥಿತರಿದ್ದರು.

ಮಂಗಳೂರು ಮಹಿಳಾ ಘಟಕದ ಸದಸ್ಯರು ಪ್ರಾರ್ಥಿಸಿದರು. ಕೇಂದ್ರ ಸಮಿತಿಯ ನಿರ್ದೇಶಕ ಭಾಸ್ಕರ್ ಕೋಟ್ಯಾನ್ ಸ್ವಾಗತಿಸಿ , ಮಹಿಳಾ ಘಟಕದ ಕಾರ್ಯದರ್ಶಿ ಕಸ್ತೂರಿ ಮಹೇಶ್ ವಂದಿಸಿದರು. ಕೇಂದ್ರ ಸಮಿತಿಯ ವಿಶುಕುಮಾರ್ ಸಮಿತಿಯ ಸಂಚಾಲಕ ಭಾಸ್ಕರ್ ಕೋಟ್ಯಾನ್ ಕೂಳೂರು ಹಾಗೂ ಮಹಿಳಾ ಘಟಕದ ಶುಭರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


Share with

Leave a Reply

Your email address will not be published. Required fields are marked *