ಕಾಸರಗೋಡು: ಕಣ್ಣೂರು ಜಿಎಲ್ ಪಿ ಎಸ್ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಧ್ವಜಾರೋಹಣ ಮಾಡಿದರು. ವಾರ್ಡ್ ಮೆಂಬರ್ ಜನಾರ್ಧನ ಪೂಜಾರಿ, ರಕ್ಷಕ ಶಿಕ್ಷಕ ಅಧ್ಯಕ್ಷ ನಟೇಶ್, ಉಪಾಧ್ಯಕ್ಷ ರಜಾಕ್ ಉಪಸ್ಥಿತರಿದ್ದರು.
ಧ್ವಜಾರೋಹಣದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಕೇರಳ ರಾಜ್ಯ ಶುಚಿತ್ವದ ಚುಕ್ಕಾಣಿಯನ್ನು ಹಿಡಿದಿರುವ ಹರಿತ ಕರ್ಮಾ ಸೇನಾ ಇದರ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಣ್ಣೂರು ಧೂಮಾವತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಮಕ್ಕಳಿಗೆ ಪಾಯಸವನ್ನು ವಿತರಿಸಿದರು.