ಮಳೆಗಾಲ ಬಂದರೆ ಸಾಕು ಹಳ್ಳಿಗಳಲ್ಲಿ ಹಲಸಿನ ಹಣ್ಣಿನ ಘಮ ಘಮಿಸುತ್ತದೆ. ಹಲಸಿನ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ? ಒಮ್ಮೆಯಾದರೂ ತಿಂದು ಬಿಡೋಣ ಅನಿಸುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಈ ಹಣ್ಣನ್ನೆ ತಿಂದು ಮೂರು ಹೊತ್ತು ಕಳೆಯುತ್ತಿದ್ದರೂ. ಈಗಿನ ಹಾಗೆ ಹಿಂದೆ ಪಟ್ಟಣಕ್ಕೆ ಹೋಗಿ ತರಕಾರಿ ಪದಾರ್ಥಗಳನ್ನು ತರವಷ್ಟು ಅನುಕೂಲ ಕಡಿಮೆಯಾಗಿದ್ದರಿಂದ ಮನೆಯಲ್ಲೆ ಆಗುತ್ತಿದ್ದ ಹಲಸಿನಿಂದ ಬಗೆಬಗೆಯ ತಿಂಡಿ ತಿನಸುಗಳನ್ನು ಮಾಡುತ್ತಿದ್ದರು. ಹಾಗೆಯೇ ನಮ್ಮ ಆರೋಗ್ಯಕ್ಕೂ ಹೆಚ್ಚು ಉಪಯೋಗಕಾರಿ ಈ ಹಲಸಿನಹಣ್ಣು.
ಮಧುಮೇಹಿಗಳು ಹಲಸಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಎಲ್ಲಾ ಆಹಾರವನ್ನು ಮಿತವಾಗಿ ಸೇವಿಸಿದರೆ ನಮ್ಮ ದೇಹಕ್ಕೂ ಹಿತವಾಗಿರುತ್ತದೆ. ಮಧುಮೇಹಿಗಳು ಅರ್ಧ ಕಪ್ ಅಂದರೆ ಸುಮಾರು 75 ಗ್ರಾಂ, ಹಲಸಿನ ಹಣ್ಣನ್ನು ಸೇವಿಸಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ದೇಹದ ದೈನಂದಿನ ಶಿಫಾರಸುಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಹಸಿ ಹಲಸು ಮಧುಮೇಹಿಗಳಿಗೆ ಉತ್ತಮವಾಗಿದ್ದು, ಬೇಯಿಸಿದ ವೈವಿಧ್ಯಕ್ಕೆ ಹೋಲಿಸಿದರೆ ಇದು ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆದರೆ, ಅದನ್ನು ಸೇವಿಸಿದ ನಂತರ ಸಕ್ಕರೆಯ ಮಟ್ಟವನ್ನು ಗಮನಿಸಬೇಕಾಗುತ್ತದೆ.