ಉಪ್ಪಳ: ಸೇವಾ ಭಾರತಿ ಜೋಡುಕಲ್ಲು ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಜೋಡುಕಲು ಕಯ್ಯಾರು ಇದರ ನೇತೃತ್ವದಲ್ಲಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಜೋಡುಕಲ್ಲು ತಪೋವನದಲ್ಲಿ ಸೆ.6 ರಂದು ವಿಜೃಂಭಣೆಯಿಂದ ಜರಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಬಳಿಕ ವಿವಿಧ ಸ್ಪರ್ಧೆಗಳು ಜರಗಿತು.
ಸಂಜೆ ವೇಳೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶೋಭಾಯಾತ್ರೆ ನೆರವೇರಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಕವಳೂರು ಎಸ್ ಆರ್ ಎ ಯು ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮೀನಾರು ಬಾಲಕೃಷ್ಣ ಶೆಟ್ಟಿ ರವರು ಅಧ್ಯಕ್ಷತೆ ವಹಿಸಿದ್ದರು.
ಧರ್ಮತಡ್ಕ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಅಧ್ಯಾಪಕಿ ಉಮಾದೇವಿ ಧಾರ್ಮಿಕ ಭಾಷಣ ಮಾಡಿದರು ಬಳಿಕ ಸಂಜಯ ವೇಳೆಗೆ ಉಳಿದ ಸ್ಪರ್ಧೆಗಳನ್ನು ನಡೆಸಲಾಯಿತು. ರಾತ್ರಿ ವಿವಿಧ ಭಜನಾ ತಂಡಗಳಿಂದ ದೇವರ ಭಜನೆ ನೆರವೇರಿತು.