ಮಂಗಳೂರು: ಮಾಜಿ ಸಚಿವ. ಬಿ ರಮಾನಾಥ ರೈ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಬೃಹತ್ ರಕ್ತದಾನ ಶಿಬಿರ’ ಕಾರ್ಯಕ್ರಮ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ ರೋಡ್ ನ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಚಿಂತಕರಾದ ಡಾ. ಉದಯ್ ಕುಮಾರ್ ಇರ್ವತ್ತೂರು ಅವರು ಮಾತನಾಡಿ ರಮಾನಾಥ ರೈ ಬಾಲ್ಯದಿಂದ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್,ಪಿಯೂಸ್ ರೋಡ್ರಿಗಝ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಶ್ವಿನ್ ಕುಮಾರ್ ರೈ, ಕಾಂಗ್ರೆಸ್ ಮುಖಂಡರಾದ ಸುದರ್ಶನ್ ಜೈನ್, ಲುಕ್ಮಾನ್ ಬಂಟ್ವಾಳ, ಬಿ.ಹೆಚ್ ಖಾದರ್, ಶಾಹುಲ್ ಹಮೀದ್,ಜಯಂತಿ ಪೂಜಾರಿ,ಅಬ್ಬಾಸ್ ಅಲಿ, ಸುಭಾಷ್ ಚಂದ್ರ ಶೆಟ್ಟಿ,ಲೋಲಾಕ್ಷ ಶೆಟ್ಟಿ, ಚರೀಷ್ಮಾ ರೈ, ರಮೇಶ್ ಕುಲಾಲ್,ಜಯಶೀಲಾ ಅಡ್ಯಂತಾಯ,ಜೋಸ್ವಿನ್ ಡಿಸೋಜಾ, ಚಿತ್ತರಂಜನ್ ಶೆಟ್ಟಿ, ಮಲ್ಲಿಕಾ ಪಕ್ಕಳ, ಐಡಾ ಸುರೇಶ್, ಸದಾಶಿವ ಬಂಗೇರ,ಮಾಯಿಲಪ್ಪ ಸಾಲ್ಯಾನ್,ಪದ್ಮನಾಭ್ ರೈ,ರೋಶನ್ ರೈ, ಪ್ರೀತಿರಾಜ್ ದ್ರಾವಿಡ್, ಸಂದೀಪ್ ಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರಾದ ಪ್ರವೀಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷದ್ ಸರವು ಸ್ವಾಗತಿಸಿದರು. ಗಣೇಶ್ ಪೂಜಾರಿ ಧನ್ಯವಾದಗೈದರು.