ಮಂಗಳೂರು: ಕೊಂಕಣಿ ಗುರುತನ್ನು ಅನ್ವೇಷಿಸುವ ಬಹು ನಿರೀಕ್ಷಿತ ಕೊಂಕಣಿ ಚಲನಚಿತ್ರ ‘ಆಸ್ಮಿತಾಯ್’ ಸೆ.೧೫ ರಂದು ಬಿಡುಗಡೆಯಾಗಿದೆ.
ಎರಿಕ್ ಒಜಾರಿಯೊ ಅವರ ಮೂಲಕತೆಗೆ ಜೋಯಲ್ ಪಿರೇರಾ ಅವರು ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿ, ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ ಅವರ ನಿರ್ದೇಶನದಿಂದ ಮಾಂಡ್ ಸೊಭಣ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲೂಯಿಸ್ ಜೆ ಪಿಂಟೊ ಅವರು ನಿರ್ಮಿಸಿದ್ದಾರೆ. ಸಂಗೀತವನ್ನು ಎರಿಕ್ ಒಜಾರಿಯೊ, ಆಲ್ವಿನ್ ಫೆರ್ನಾಂಡಿಸ್, ಕಾಜೆಟನ್ ಡಯಾಸ್ ಮತ್ತು ಜೋಯಲ್ ಪಿರೇರಾ ಅವರು ಸಂಯೋಜಿಸಿ, ದೃಶ್ಯಗಳನ್ನು ಬಾಲರಾಜ್ ಗೌಡ ಸುಂದರವಾಗಿ ಸೆರೆಹಿಡಿದಿದ್ದಾರೆ.
ಈ ಚಿತ್ರದಲ್ಲಿ ಅಶ್ವಿನ್ ಡಿ’ಕೋಸ್ತಾ ಮತ್ತು ವೆನ್ಸಿಟಾ ಡಯಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸಂದೀಪ್ ಮಲಾನಿ, ಡೇನಿಸ್ ಮೊಂತೇರು, ಸ್ಟ್ಯಾನಿ ಅಲ್ವಾರಿಸ್, ಪ್ರಿನ್ಸ್ ಜೇಕಬ್, ಗೋವಾದ ಸಾಯಿ ಪನಂದಿಕರ್, ಗೌರಿಶ್ ವೆರ್ನೆಕರ್, ಲುಲು ಫೋರ್ಟೆಸ್, ಎರಿಕ್ ಒಜಾರಿಯೊ, ರಾಯ್ ಕ್ಯಾಸ್ಟೆಲಿನೊ, ಹ್ಯಾರಿ ಕೊರಿಯಾ, ನೆಲ್ಲು ಪೆರ್ಮಾನೂರ್, ನವೀನ್ ಲೋಬೊ, ಅರುಣ್ ನೊರೊನ್ಹಾ, ಮಿಶಾಲ್ ಫರ್ನಾಂಡಿಸ್, ಸುನಿಲ್ ಸಿದ್ದಿ ಹಾಗೂ ವಿತೊರಿ ಕಾರ್ಕಳ ಅವರು ಅಭಿನಯಿಸಿದ್ದಾರೆ.
ಸೆಪ್ಟೆಂಬರ್ ೧೦ ರಂದು ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಇದು ಪ್ರೇಕ್ಷಕರಿಂದ ಅಗಾಧ ಪ್ರತಿಕ್ರಿಯೆಯನ್ನು ಕಂಡಿತು.
ಬಿಗ್ ಸಿನಿಮಾಸ್ ಮಂಗಳೂರು, ಮಣಿಪಾಲ, ಪಡುಬಿದ್ರಿ, ಪುತ್ತೂರು, ಕುಂದಾಪುರ, ಸಿನಿ ಗ್ಯಾಲಕ್ಸಿ ಸುರತ್ಕಲ್, ಭಾರತ್ ಟಾಕೀಸ್ ಬೆಳ್ತಂಗಡಿ, ಕಲ್ಪನಾ ಥಿಯೇಟರ್ ಉಡುಪಿ, ಪದ್ಮಾಂಜಲಿ ಟಾಕೀಸ್ ಹೊನ್ನಾವರ ಮತ್ತು ಪ್ಲಾನೆಟ್ ಸಿನಿಮಾ ಕಾರ್ಕಳದಲ್ಲಿ ಸೆ.೧೫ ರಂದು ಬಿಡುಗಡೆಯಾಗಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬೈ, ಗೋವಾ, ಯುಎಇ, ಕುವೈತ್, ಕತಾರ್, ಬಹ್ರೇನ್, ಓಮನ್, ಇಸ್ರೇಲ್, ಜರ್ಮನಿ, ಆಸ್ಟ್ರೇಲಿಯಾ, ಐರ್ಲೆಂಡ್ ಮತ್ತು ಯುಎಸ್‌ಎಗಳಲ್ಲಿ ಆಸ್ಮಿತಾಯ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.