ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಸೋಲು!

Share with

ಏಷ್ಯಾಕಪ್: ಬಾಂಗ್ಲಾದೇಶ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ಕೊನೆ ಕ್ಷಣದಲ್ಲಿ ಎಡವಿದ್ದು, 6 ರನ್‌ಗಳಿಂದ ಸೋತಿದೆ.

266 ರನ್‌ಗಳ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟಾಯಿತು. ಭಾರತದ ಪರ ಶುಭಮನ್ ಗಿಲ್ ಭರ್ಜರಿ ಶತಕ (121) ಸಿಡಿಸಿದರೆ, ಅಕ್ಷರ್ ಪಟೇಲ್ (42) ರನ್ ಹೊಡೆದರು. 6 ಬ್ಯಾಟರ್‌ಗಳು ಎರಡಂಕಿ ಮೊತ್ತ ಸಹ ತಲುಪಲು ವಿಫಲರಾದರು. ಬಾಂಗ್ಲಾ ಪರ ರೆಹಮಾನ್ 3, ಶಕಿಬ್ ಮತ್ತು ಹಸನ್ ತಲಾ 2 ವಿಕೆಟ್ ಪಡೆದರು.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಅಲ್ಪ ಮೊತ್ತಕ್ಕೆ ಔಟಾದರೂ ವಿಶಿಷ್ಟ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.

ಮೆಹಿದಿ ಹಸನ್ ಅವರ ಕ್ಯಾಚ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200ನೇ ಕ್ಯಾಚ್ (449 ಪಂದ್ಯ) ಹಿಡಿದ ಸಾಧನೆ ಮಾಡಿದ್ದಾರೆ. ಈಗಾಗಲೇ ಈ ಲಿಸ್ಟ್‌ನಲ್ಲಿ 34 ಮಂದಿ ಇದ್ದು, ಲಂಕಾದ ಜಯವರ್ಧನೆ ಅಗ್ರ (652 ಪಂದ್ಯ, 440 ಕ್ಯಾಚ್) ಸ್ಥಾನದಲ್ಲಿದ್ದಾರೆ. ದ್ರಾವಿಡ್, ಸಚಿನ್, ಅಜರ್, ಕೊಹ್ಲಿ ಸಹ ಈ ಪಟ್ಟಿಯಲ್ಲಿದ್ದಾರೆ.


Share with

Leave a Reply

Your email address will not be published. Required fields are marked *