ಉಡುಪಿ: ಗಣೇಶ ಚತುರ್ಥಿಯ ಪ್ರಯುಕ್ತ ಕರಾವಳಿಯಾದ್ಯಂತ ಗಣಪನನ್ನು ಹಲವು ರೀತಿಯಲ್ಲಿ ಆರಾಧನೆ ಮಾಡುತ್ತಾರೆ.
ಆದರೆ ಮಣಿಪಾಲದ ವೇಣುಗೋಪಾಲ ದೇವಸ್ಥಾನದಲ್ಲಿ ಚಂದ್ರಯಾನ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದು ಭಕ್ತರನ್ನು ಆಕರ್ಷಿಸುತ್ತಿದೆ. ರಾಘವೇಂದ್ರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಕಲಾವಿದರಾದ ಶ್ರೀನಾಥ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಅವರ ಕಲ್ಪನೆಯಿಂದ ಈ ವಿಭಿನ್ನ ರೀತಿಯ ಗಣಪತಿಯು ಮೂಡಿಬಂದಿದೆ.