
ಹೊಳೆನರಸೀಪುರ: ಹೊಳೆನರಸೀಪುರದ ಸೀಗರಹಳ್ಳಿಯಲ್ಲಿ ತಿಮ್ಮೇಗೌಡ ಮತ್ತು ದೇವರಾಜು ನಡುವೆ ಅರ್ಧ ಗಂಟೆಯೊಳಗೆ ಯಾರು ಹೆಚ್ಚು ಮದ್ಯ ಸೇವಿಸುತ್ತಾರೆ ಎಂಬ ಚಾಲೆಂಜ್ ನಡೆದಿದ್ದು, ಅತಿಯಾಗಿ ಮದ್ಯ ಕುಡಿದವನು ರಕ್ತ ವಾಂತಿ ಮಾಡಿ ಸಾವನ್ನಪ್ಪಿದ ಘಟನೆ ನಡೆದಿದೆ.
ಇವರಿಬ್ಬರಿಗೂ ಕೃಷ್ಣೇಗೌಡ ಎಂಬಾತ ಮದ್ಯದ ಪ್ಯಾಕೆಟ್ ಗಳನ್ನು ನೀಡಿದ್ದಾನೆ ಎಂದು ತಿಳಿದು ಬಂದಿದ್ದು, ಅತಿಯಾಗಿ ಮದ್ಯ ಸೇವಿಸಿದ ತಿಮ್ಮೇಗೌಡ ರಕ್ತ ವಾಂತಿ ಮಾಡುತ್ತಿರುವುದನ್ನು ಕಂಡು ಉಳಿದಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಸ್ ಸ್ಟ್ಯಾಂಡಿನಲ್ಲಿ ಬಿದ್ದಿದ್ದ ತಿಮ್ಮೇಗೌಡನನ್ನು ಸ್ಥಳೀಯರು ಮನೆಗೆ ತಲುಪಿಸಿದ್ದು, ಮನೆಯಲ್ಲಿ ತಿಮ್ಮೇಗೌಡ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.