ಬೆಂಗಳೂರು: ಅಪಾರ್ಟ್ಮೆಂಟ್ ನಿಂದ ಬಾಲಕಿಯೋರ್ವಳು ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.
ವಿಜಯಲಕ್ಷ್ಮಿ (17) ವರ್ಷ ಅಪಾರ್ಟ್ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ತಿಳಿದು ಬಂದಿದೆ. ಬೆಂಗಳೂರಿನ ಬ್ಯಾಟರಾಯನಪುರ ನಿವಾಸಿಯಾಗಿದ್ದ ಈಕೆ ಇಲ್ಲಿನ ಬ್ರೈಡ್ ಅಪಾರ್ಟ್ಮೆಂಟ್ನ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಖಿನ್ನತೆಗೊಳಗಾಗಿದ್ದ ಯುವತಿ ಈ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಧರ್ಮಸ್ಥಳಕ್ಕೆ ಬಂದಿದ್ದು, ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ವೇಳೆ ಸ್ಥಳೀಯರೊಬ್ಬರು ರಕ್ಷಣೆ ಮಾಡಿ ಪೋಷಕರಿಗೆ ಪೋನ್ ಮಾಡಿ ಬುದ್ಧಿ ಹೇಳಿ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.