
ಮೈಸೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಂದು ದಿನ ಮೊದಲೇ ಮಾರಾಟವಾಗಿರುವುದು ವರದಿಯಾಗಿದೆ. ವಾಟ್ಸ್‌ಆಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್‌ಒಯು ಮಂಗಳೂರು ಕೇಂದ್ರದ ಸಿಬ್ಬಂದಿಯಿಂದ ಪ್ರಶ್ನೆಪತ್ರಿಕೆ ಮಾರಾಟವಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಯೋರ್ವ ಪ್ರಶ್ನೆ ಪತ್ರಿಕೆಯನ್ನು 2000 ರೂಪಾಯಿ ನೀಡಿ ಖರೀದಿ ಮಾಡಿ ಪರಿಶೀಲಿಸಿದಾಗ ಪರೀಕ್ಷೆಗೆ ನೀಡಿದ ಪ್ರಶ್ನೆ ಪತ್ರಿಕೆ ಹಾಗೂ ಮಾರಾಟ ಮಾಡಿದ ಪ್ರಶ್ನೆ ಪತ್ರಿಕೆ ಎರಡು ಒಂದೇ ಆಗಿದೆ.
ಕಂಪ್ಯೂಟರ್ ಇನ್ ಬ್ಯುಸಿನೆಸ್ ವಿಷಯದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.