ಬದಿಯಡ್ಕ: ಪಳ್ಳತ್ತಡ್ಕದಲ್ಲಿ ಬಸ್ಸು, ರಿಕ್ಷಾ ಡಿಕ್ಕಿ- 5 ಮಂದಿ ದಾರುಣ ಮೃತ್ಯು..!

Share with

ಕಾಸರಗೋಡು: ಆಟೋ ರಿಕ್ಷಾ ಹಾಗೂ ಶಾಲಾ ಬಸ್ ಪರಸ್ಪರ ಡಿಕ್ಕಿಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಐದು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಸೆ.25 ರಂದು ಸಂಜೆ 5 ಗಂಟೆಗೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ‌.

ಅಪಘಾತ

ಪೆರ್ಲ ಭಾಗದಿಂದ ಚಲಿಸುತ್ತಿದ್ದ ಮಾನ್ಯದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಮತ್ತು ಮೊಗ್ರಲ್ ಪುತ್ತೂರು ಮೂಲದ ರಿಕ್ಷಾ ಅಪಘಾತಕ್ಕಿಡಾಗಿರುವುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಮುುುಸ್ಲಿಂ ಮೂಲದ ಡ್ರೈವರ್ ಸಹಿತ ಓರ್ವ ಪುರುಷ ಹಾಗೂ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಪೆರ್ಲ ಭಾಗದಲ್ಲಿ ಇಳಿಸಿದ ಶಾಲಾ ಬಸ್ ಖಾಲಿಯಾಗಿ ಸಂಚರಿಸುತ್ತಿದ್ದಾಗ ಪಳ್ಳತ್ತಡ್ಕದ ಗುಳಿಗ ಬನದ ಅನತಿ ದೂರದ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ.

ಮೃತರ ಪರಿಚಯ ಸ್ಥಳದಲ್ಲಿ ಇದ್ದವರಿಗೆ ಮಾಹಿತಿ ಲಭಿಸಿಲ್ಲವಾದ್ದರಿಂದ ಗುರುತು ಪತ್ತೆ ಹಚ್ಚಲು ಗಂಟೆಗಳಷ್ಟು ಕಾಲ ಪರದಾಡಬೇಕಾಯಿತು. ಮೃತದೇಹವನ್ನು‌ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.


Share with

Leave a Reply

Your email address will not be published. Required fields are marked *