ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಹುಟ್ಟುಹಬ್ಬ ಹಿನ್ನಲೆಯಲ್ಲಿ ಬಂದಾರು ಶಾಲೆಯ ವಿದ್ಯಾರ್ಥಿಗಳಿಂದ ಲಕ್ಷ್ಮೀ ಇಂಡಸ್ಟ್ರೀಸ್ (ಕನಸಿನ ಮನೆ) ಕಂಪನಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆಯು ಇಂದು ನಡೆಯಿತು.
ಸರಕಾರಿ ಉನ್ನತ್ತಿಕರಿಸಿದ ಪ್ರಾಥಮಿಕ ಶಾಲೆ ಬಂದಾರು ಬೆಳ್ತಂಗಡಿ ಡಿಸೆಂಬರ್ ನಲ್ಲಿ ಒರಿಸ್ಸಾದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು ಈ ವಿದ್ಯಾರ್ಥಿಗಳಿಗೆ 12 ವಾಲಿಬಾಲ್ ಮತ್ತು 1 ನೆಟ್ ಹಾಗೂ ಧನಸಹಾಯ ನೀಡಿದ ಬದುಕು ಕಟ್ಟೋಣ ಬನ್ನಿ ತಂಡ ನೀಡಿದೆ.
ಆಯ್ಕೆಯಾದ ಸುಮಾರು 14 ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ತರಬೇತಿ ನೀಡುತ್ತಿದೆ. ಮುಂದಿನ ಪಂದ್ಯಾಟದ ಎಲ್ಲ ಖರ್ಚು ವೆಚ್ಚವನ್ನು ಬದುಕು ಕಟ್ಟೋಣ ಬನ್ನಿ ತಂಡ ಭರಿಸಲಿದೆ.
ಸಿರಿ ಸಂಸ್ಥೆಯ ಇಡಿ ಜನಾರ್ಧನ್ , ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ , ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಉಪಸ್ಥಿತರಿದ್ದರು.