ಕಾಸರಗೋಡು: ಎಲ್ಲಿನ ಅನಂತಪುರ ಪರಿಸರದಲ್ಲಿ ದುರ್ಗಂಧ ಬೀರುತ್ತಿರುವ ಕೋಳಿ ತ್ಯಾಜ್ಯ ಸಂಸ್ಕರಣಾ ಕಾರ್ಖಾನೆಗಳಿಗೆದುರಾಗಿ “ಅನಂತಪುರ ಉಳಿಸಿ” ಕ್ರಿಯಾ ಸಮಿತಿ ವತಿಯಿಂದ ನಡೆಸಲ್ಪಡುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಅ.2ರಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಪ್ರಾರಂಭಗೊಂಡಿದೆ.
ಕ್ರಿಯಾ ಸಮಿತಿಯ ಅಧ್ಯಕ್ಷ ಶರೀಫ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಜನಾರ್ಧನ ಕಣ್ಣೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇದು ಜೀವನ್ಮರಣ ಹೋರಾಟ ಯಾವುದೇ ಅಭಿವೃದ್ಧಿ ಎದುರಾಗಿ ಅಲ್ಲ. ಪರಿಸರದಲ್ಲಿ ಜನರ ಆರೋಗ್ಯಕ್ಕೆ ಈ ಕಾರ್ಖಾನೆಗಳ ದುರ್ಗಂಧ ಹಾನಿಕಾರಕ ಎಂದು ಹೇಳಿದರು.
ಧರಣಿ ಸತ್ಯಾಗ್ರಹಕ್ಕೆ ಬೆಂಬಲವನ್ನು ಸೂಚಿಸಿ ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಅಜಯ್, ನಾರಾಯಣ ಬಳಕ್ಕಿಲ, ಮನೋಹರನ್ ಕಾಮನಬೈಲ್, ಗೋಪಾಲ ಮುಖಾರಿ ಪೆರ್ಣೆ, ಚಂದ್ರಶೇಖರ ಅನಂತಪುರ, ಇ.ಕೆ ಮೊಹಮ್ಮದ್ ಕುಂಞಿ , ಅಬ್ದುಲ್ಲಾ ಪುತ್ತಿಗೆ, ಹರೀಶ್ ಸಿದ್ದಿಬೈಲ್, ಜಯಂತ ಪಾಟಾಳಿ ಸುಜಿತ್ ರೈ ಕುಂಬಳೆ ,ಶ್ರೀ ಕೃಷ್ಣಯ್ಯ ಅನಂತಪುರ , ಉದ್ಯಮಿ ನಸೀರ್ ಕಣ್ಣೂರ್ ಮುಂತಾದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಊರಿನ ಗಣ್ಯರು ಭಾಗವಹಿಸಿ ಮಾತನಾಡಿದರು.
ಸಮಿತಿ ಸದಸ್ಯ ಸ್ವಾಗತ್ ಸಿತಾಂಗೋಳಿ ಪ್ರಾಸ್ತಾವಿಕವಾಗಿ ಸಮಿತಿಯ ಬೆಳವಣಿಗೆಗಳನ್ನು ವಿವರಿಸಿದರು. ಸಮೆತಿ ಕಾರ್ಯದರ್ಶಿ ಸುನಿಲ್ ಅನಂತಪುರ ಸ್ವಾಗತಿಸಿ ಸಮಿತಿ ಸದಸ್ಯ ಅವಿನಾಶ್ ಕಾರಂತ ಧನ್ಯವಾದಗೈದರು.