ನವದೆಹಲಿ: ಉಜ್ವಲ್ ಯೋಜನೆಯ ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ ದರವನ್ನು 200ರೂ.ಗೆ ಕೇಂದ್ರ ಸರ್ಕಾರ ಹೆಚ್ಚಳ ಮಾಡಿದ್ದು ಇಂದು(ಅ.4) ಮತ್ತೆ 200 ರೂಗಳಿಂದ 300 ರೂ.ಗಳಿಗೆ ಹೆಚ್ಚಳ ಮಾಡಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಬ್ಸಿಡಿ ಮೊತ್ತವನ್ನು ಪ್ರತಿ ಎಲ್ಪಿಜಿ ಸಿಲಿಂಡರ್ಗೆ 200 ರೂ.ಗಳಿಂದ 300 ರೂ.ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ(ಅ.4) ಕ್ಯಾಬಿನೆಟ್ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
ರಕ್ಷಾ ಬಂಧನದ ಸಂದರ್ಭದಲ್ಲಿ, ಎಲ್ಪಿಜಿ ಬೆಲೆಯಲ್ಲಿ 200 ರೂ.ಗಳ ಕಡಿತವನ್ನು ಘೋಷಿಸಲಾಯಿತು, ಇದು ಎಲ್ಪಿಜಿ ದರವನ್ನು 1100 ರೂ.ಗಳಿಂದ 900 ರೂ.ಗೆ ಇಳಿಸಲು ಕಾರಣವಾಯಿತು. ಇಂದು, ಉಜ್ವಲ ಯೋಜನೆಯ ಫಲಾನುಭವಿಗಳು ಈಗ 200 ರೂ.ಗಳ ಬದಲು 300 ರೂ.ಗಳ ಸಬ್ಸಿಡಿಯನ್ನು ಪಡೆಯುವ ಹೊಸ ಘೋಷಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.