ಬೆಂಗಳೂರು: ನವೆಂಬರ್ 24 -25ಕ್ಕೆ ಬೆಂಗಳೂರಿನಲ್ಲಿ ನಡೆಯುವ “ಬೆಂಗಳೂರು ಕಂಬಳ ನಮ್ಮ ಕಂಬಳ” ಕರೆ ಮುಹೂರ್ತವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 11 ಬುಧವಾರ ದಂದು ಮಧ್ಯಾಹ್ನ 10.15 ಗಂಟೆ ಸಮಯಕ್ಕೆ ಸರಿಯಾಗಿ ನಿಗದಿ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಮತ್ತು ಕಂಬಳ ಅಭಿಮಾನಿಗಳು, ಕಂಬಳ ಸಮಿತಿಯ ಪದಾಧಿಕಾರಿಗಳು, ತುಳು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಅವರು ವಿನಂತಿ ಮಾಡಿಕೊಂಡಿರುತ್ತಾರೆ.