ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ಮೂಲದ ಯುವಕ ನಾಪತ್ತೆ

Share with

ಬೆಳ್ತಂಗಡಿ ಮೂಲದ ಯುವಕ ನಾಪತ್ತೆ.

ಕೊಟ್ಟಿಗೆಹಾರ: ಮೂಡಿಗೆರೆಯ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ಮೂಲದ ಯುವಕ ನಾಪತ್ತೆಯಾದ ಘಟನೆ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದ ಯುವಕನನ್ನು ಬೆಳ್ತಂಗಡಿ ತಾಲೂಕಿನ ಕೊಯ್ಯುರಿನ ನಿವಾಸಿ ದೀಕ್ಷಿತ್ (27 ವರ್ಷ) ಎನ್ನಲಾಗಿದೆ.

ಬೆಳ್ತಂಗಡಿ ತಾಲೂಕಿನಿಂದ ನಾಲ್ಕು ಯುವಕರ ತಂಡ ದೇವರಮನೆಗೆ ಪ್ರವಾಸಕ್ಕೆ ಬಂದಿದ್ದು ಪ್ರವಾಸ ಮುಗಿಸಿ ಹಿಂದಿರುಗುವಾಗ ಗುಡ್ಡ ತೋಟ ಬಳಿ ಕಾರು ನಿಲ್ಲಿಸಿ ಯುವಕರು ಜಗಳವಾಡಿಕೊಂಡಿದ್ದಾರೆ, ಇದರಿಂದ ಕಾರು ಹತ್ತದೆ ಹೋದ ಯುವಕ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ.

ಮಂಗಳವಾರ ಸಂಜೆ ನಾಪತ್ತೆಯಾಗಿದ್ದು ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ. ದೇವರ ಮನೆ ಸುತ್ತಮುತ್ತ ಮಂಜು ಕವಿದಿದ್ದರಿಂದ ಹುಡುಕಾಟಕ್ಕೆ ಅಡಚಣೆಯಾಗಿದ್ದು ಇಂದು ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *