ಇಸ್ರೇಲ್: ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ನಲ್ಲಿ ಕನಿಷ್ಠ 40 ಶಿಶುಗಳ ಹತ್ಯೆ ಮಾಡಿದೆ. ಈ ಪೈಕಿ ಕೆಲವು ಮಕ್ಕಳ ಶಿರಚ್ಛೇಧ ಮಾಡಲಾಗಿದೆ ಎಂದು ಇಸ್ರೇಲ್‌ನ ಐ24 ನ್ಯೂಸ್ ವರದಿಯನ್ನು ಮಾಡಿದೆ. ಹಮಾಸ್ ದಾಳಿಯನ್ನು ಎದುರಿಸಲು ರಿಸರ್ವ್ ಸರ್ವೀಸ್ ಕರೆಯಿಸಿಕೊಳ್ಳುವಷ್ಟರಲ್ಲಿ ಈ ಹತ್ಯೆ ನಡೆದು ಹೋಗಿತ್ತು. ಆದರೆ, ಈ ಹತ್ಯೆಯ ದೃಶ್ಯಗಳು ನಿಮ್ಮ ಕಲ್ಪನೆಗೂ ಮೀರಿದ್ದಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 3000ಕ್ಕೆ ಏರಿಕೆಯಾಗಿದೆ.
ಶಿರಚ್ಛೇಧ ಶಿಶುಗಳನ್ನು ಕಂಡಿದ್ದೇವೆ ಎಂದು ಕೆಲವು ಸೈನಿಕರು ಹೇಳಿದ್ದು, ಮಲಗಿದ್ದಾಗಲೇ ಇಡೀ ಕುಟುಂಬದ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಗರ್ನಿಗಳಿಂದ ಇದುವರೆಗೆ ಹತ್ಯೆಗೀಡಾದ ಸುಮಾರು 40 ಶಿಶುಗಳು ಮತ್ತು ಮಕ್ಕಳ ಶವಗಳನ್ನು ಹೊರ ತೆಗೆಯಲಾಗಿದೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಭೀಕರ ದಾಳಿಯಲ್ಲಿ ಇದುವರೆಗೆ ಕನಿಷ್ಠ 900 ಇಸ್ರೇಲಿಗಳು ಮೃತಪಟ್ಟು, 2600ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.